ಅರ್ಥಪೂರ್ಣ ವಚನ ವಿಜಯೋತ್ಸವಕ್ಕೆ ನಿರ್ಧಾರ

Channabasava Hangargi
Published on

ಬೀದರ್: ಲಿಂಗಾಯತ ಮಹಾ ಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಫೆಬ್ರುವರಿ 10 ರಿಂದ 12 ರ ವರೆಗೆ ಅದ್ಧೂರಿ ಹಾಗೂ ಅರ್ಥಪೂರ್ಣ ವಚನ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಲಿಂಗಾಯತ ಮಹಾ ಮಠದ ಕಾರ್ಯದರ್ಶಿ ಚನ್ನಬಸವ ಹಂಗರಗಿ ತಿಳಿಸಿದ್ದಾರೆ.

ಪ್ರಭುದೇವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ನಾಡಿನ ವಿವಿಧೆಡೆಯ ಅಕ್ಕ ಅನ್ನಪೂರ್ಣತಾಯಿ ಅವರ ಅನುಯಾಯಿಗಳು ಹಾಗೂ ಬಸವ ಭಕ್ತರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ನಾಡಿನ ಮಠಾಧೀಶರು ಹಾಗೂ ಗಣ್ಯರಿಗೆ ವಚನ ವಿಜಯೋತ್ಸವಕ್ಕೆ ಆಹ್ವಾನಿಸಲಾಗಿದೆ. ಜಿಲ್ಲೆಯಾದ್ಯಂತ ವಚನ ವಿಜಯೋತ್ಸವದ ಪ್ರಚಾರ ಕೈಗೊಳ್ಳಲು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ವಚನ ವಿಜಯೋತ್ಸವದ ವೈಭವ ಮರುಕಳಿಸಬೇಕು ಎಂಬುದು ಅಕ್ಕ ಅನ್ನಪೂರ್ಣತಾಯಿ ಅವರ ಕೊನೆಯ ಆಸೆಯಾಗಿತ್ತು. ಅವರ ಅಪೇಕ್ಷೆಯಂತೆ ವಿವಿಧ ಗೋಷ್ಠಿಗಳು, ವಚನ ಸಾಹಿತ್ಯದ ಮೆರವಣಿಗೆ ಸೇರಿದಂತೆ ಮಾದರಿ ವಚನ ವಿಜಯೋತ್ಸವ ಸಂಘಟಿಸಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net