ರಾಜಣ್ಣ, ಡಾ. ಆರತಿಗೆ ಪ್ರಶಸ್ತಿ

Arati Raghu - Copy
Published on

ಬೀದರ್: ಬೆಂಗಳೂರಿನ ಬಾಗಲೂರು ವಿ.ಜೆ. ಇಂಟರ್‍ನ್ಯಾಷನಲ್ ಶಾಲಾ ಮೈದಾನದಲ್ಲಿ ಡಿ. 28 ಮತ್ತು 29 ರಂದು ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ರಾಜ್ಯ ಸಂಯೋಜಕ ದಾನಿ ಬಾಬುರಾವ್ ತಿಳಿಸಿದ್ದಾರೆ.

ಚಿತ್ರನಟಿ ಉಮಾಶ್ರೀ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ, ಕೇಂದ್ರ, ರಾಜ್ಯದ ಸಚಿವರು, ಜನಪ್ರತಿನಿಧಿಗಳು, ವಿಜ್ಞಾನಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ಜರುಗಲಿವೆ. ವಿಜ್ಞಾನ ವಸ್ತು ಪ್ರದರ್ಶನ, ನಾಟಕ ಪ್ರದರ್ಶನ, ಹಾಸ್ಯ ಸಂಜೆ, ಕರಕುಶಲ, ಆಹಾರ ಮೇಳಗಳು ಇರಲಿವೆ ಎಂದು ತಿಳಿಸಿದ್ದಾರೆ.

ಸಮ್ಮೇಳನದ ನಿಮಿತ್ತ ನೀಡಲಾಗುವ ರಾಜ್ಯಮಟ್ಟದ ಎಚ್.ಎನ್. ಪ್ರಶಸ್ತಿಗೆ ಜಿಲ್ಲೆಯ ರಾಜಣ್ಣ ಪಿ. ಹುಡಗಿಕರ್ ಹಣಕುಣಿ ಹಾಗೂ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿಗೆ ಡಾ. ಆರತಿ ರಘು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಮ್ಮೇಳನದಲ್ಲಿ ವಿವಿಧೆಡೆಯಿಂದ ಬರುವವರಿಗೆ ಉಪಾಹಾರ, ಊಟ ಹಾಗೂ ವಸತಿ ಸೌಲಭ್ಯ ಇರಲಿದೆ. ಜಿಲ್ಲೆಯ ಜನ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net