ಶರಣ ಮೇಳದಲ್ಲಿ ಪಾಲ್ಗೊಳ್ಳಿ

Sharan Mela Prachar Meeting
Published on

ಬೀದರ್: ಕೂಡಲಸಂಗಮದಲ್ಲಿ ಜ. 12 ರಿಂದ 14 ರ ವರೆಗೆ ನಡೆಯಲಿರುವ ಶರಣ ಮೇಳದಲ್ಲಿ ಬೀದರ್ ಜಿಲ್ಲೆಯ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಮನವಿ ಮಾಡಿದರು.

ನಗರದ ಕೆ.ಕೆ. ಗಂದಿಗುಡಿ ಕಲ್ಯಾಣ ಮಂಟಪದಲ್ಲಿ ನಡೆದ ಶರಣ ಮೇಳ ಪ್ರಚಾರ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣ ಮೇಳಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆದಿವೆ. ಎಲ್ಲೆಡೆ ಮೇಳದ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಬಸವ ದಳದ ಬೀದರ್ ನಗರ ಘಟಕದ ನೂತನ ಅಧ್ಯಕ್ಷ ವಿವೇಕಾನಂದ ಕಾಶೆಪ್ಪ ಧನ್ನೂರ ಅವರನ್ನು ಅಭಿನಂದಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಗಾಂಧಿಗಂಜ್ ಸಹಕಾರ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಕಾಜಿ, ಶಿವಶರಣಪ್ಪ ಹುಗ್ಗಿ ಪಾಟೀಲ ಹಾಗೂ ರಾಜಕುಮಾರ ಬೇಲೂರೆ ಅವರನ್ನು ಸನ್ಮಾನಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಶೀಲಾ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ನೇತೃತ್ವ ವಹಿಸಿದ್ದರು.

ಪ್ರಮುಖರಾದ ಚಂದ್ರಶೇಖರ ಹೆಬ್ಬಾಳೆ, ರಾಜೇಂದ್ರಕುಮಾರ ಗಂದಗೆ, ಶಂಕರೆಪ್ಪ ಪಾಟೀಲ, ಜಹೀರಾಬಾದ್, ಡಾ. ಶರಣಪ್ಪ ಬಾಲೋದೆ, ಸಂಜೀವಕುಮಾರ ಪಾಟೀಲ, ಶಿವಶರಣಪ್ಪ ವಲ್ಲೇಪುರೆ, ನಾಗಯ್ಯ ಸ್ವಾಮಿ ಮುಧೋಳ, ಶಿವಕುಮಾರ ಪಾಟೀಲ ನಾವದಗೇರಿ, ಅಶೋಕ ಶೀಲವಂತ ಮತ್ತಿತರರು ಇದ್ದರು.

ಕಸ್ತೂರಬಾಯಿ ಕಂಟೆಪ್ಪ ಗಂದಿಗುಡಿ ದಂಪತಿ ಗುರು ಬಸವ ಪೂಜೆ ನೆರವೇರಿಸಿದರು. ಸುಲೋಚನಾ ವಿವೇಕ ಪಟ್ನೆ ಪ್ರಾರ್ಥನೆ ನಡೆಸಿಕೊಟ್ಟರು.

ರಾಜೇಂದ್ರ ಜೊನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧರಾಮ ಶೆಟಕಾರ್ ಸ್ವಾಗತಿಸಿದರು. ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ಗಣೇಶ ಬಿರಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net