ರಾಷ್ಟ್ರೀಯ ಸಂಯೋಜಕ ಹುದ್ದೆಯಲ್ಲಿ ಘಾಳೆ ಮುಂದುವರಿಕೆ

Prakash Ghale - Copy
Published on

ಬೀದರ್: ಕಾಂಗ್ರೆಸ್ ಕಿಸಾನ್, ಖೇತ್ ಮಜ್ದೂರ್ ವಿಭಾಗದ ರಾಷ್ಟ್ರೀಯ ಸಂಯೋಜಕ ಹುದ್ದೆಯಲ್ಲಿ ಜಿಲ್ಲೆಯ ಹಿರಿಯ ಮುಖಂಡ ಪ್ರಕಾಶ ಘಾಳೆ ಅವರನ್ನು ಪಕ್ಷ ಇನ್ನೊಂದು ಅವಧಿಗೆ ಮುಂದುವರಿಸಿದೆ.

ಉತ್ತಮ ಕಾರ್ಯ ನಿರ್ವಹಣೆ ಹಿನ್ನೆಲೆಯಲ್ಲಿ ಎಐಸಿಸಿಯ ಕಿಸಾನ್, ಖೇತ್ ಮಜ್ದೂರ್ ವಿಭಾಗದ ಅಧ್ಯಕ್ಷ ಸುಖಪಾಲ್ ಸಿಂಗ್  ಖೈರಾ ಅವರು ವಿಭಾಗದ ಹೊಸ ಪದಾಧಿಕಾರಿಗಳ ಪಟ್ಟಿಯಲ್ಲೂ ಘಾಳೆ ಅವರಿಗೆ ಸ್ಥಾನ ನೀಡಿದ್ದಾರೆ. ಜತೆಗೆ, ಅವರಿಗೆ ಮಹಾರಾಷ್ಟ್ರ ಹಾಗೂ ತೆಲಂಗಾಣ ಕಿಸಾನ್, ಖೇತ್ ಮಜ್ದೂರ್ ವಿಭಾಗದ ಉಸ್ತುವಾರಿ ಹೊಣೆಯನ್ನೂ ಕೊಟ್ಟಿದ್ದಾರೆ.

ಔರಾದ್ ತಾಲ್ಲೂಕಿನ ಚಿಮ್ಮೆಗಾಂವ್ ಗ್ರಾಮದ ಪ್ರಕಾಶ ಘಾಳೆ ಕಟ್ಟಾ ಕಾಂಗ್ರೆಸ್ಸಿಗರಾಗಿದ್ದಾರೆ. ಅವರ ಪಕ್ಷ ನಿಷ್ಠೆಗೆ ಪಕ್ಷದ ವಿವಿಧ ಉನ್ನತ ಹುದ್ದೆಗಳು ಒಲಿದು ಬಂದಿವೆ.

ಘಾಳೆ ಅವರು ಹಿಂದೆ ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದ ಆರು ಜಿಲ್ಲೆಗಳ ಉಸ್ತುವಾರಿಯಾಗಿ ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದರು. ರೈತರ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದರು. ಅದರ ಫಲವಾಗಿ ಅವರಿಗೆ ರಾಷ್ಟ್ರೀಯ ಸಂಯೋಜಕ ಹುದ್ದೆಯಲ್ಲಿ ಮುಂದುವರಿಯುವ ಅವಕಾಶ ಸಿಕ್ಕಿದೆ.

ರಾಷ್ಟ್ರೀಯ ಸಂಯೋಜಕರಾಗಿ ಮುಂದುವರಿಸಿದ್ದಕ್ಕೆ ಸಂತಸವಾಗಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ದೊರೆತಿದೆ. ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಪ್ರಕಾಶ ಘಾಳೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net