

ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜನವಾಡ ರಸ್ತೆ ಬಳಿಯ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ಷಾ ವಿರುದ್ಧ ಘೋಷಣೆ ಕೂಗಿದರು. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಷಾ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯ. ಷಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಸಮಿತಿ ಜಿಲ್ಲಾ ಗೌರವಾಧ್ಯಕ್ಷರಾದ ರಾಜಕುಮಾರ ಮೂಲಭಾರತಿ, ಚಂದ್ರಕಾಂತ ನಿರಾಟೆ, ಕಲ್ಯಾಣರಾವ ಭೋಸ್ಲೆ, ಅಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್, ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್, ಕಾರ್ಯಾಧ್ಯಕ್ಷರಾದ ವಿಷ್ಣುವರ್ಧನ್ ವಾಲ್ದೊಡ್ಡಿ, ಅಭಿ ಕಾಳೆ, ಪ್ರಮುಖರಾದ ಸಂಜಯ ಭೊಸ್ಲೆ, ಅಂಬರೀಶ್ ಕುದುರೆ, ರಾಜಕುಮಾರ ಸಿಂಧೆ, ರಾಜಕುಮಾರ ಡೊಂಗರೆ, ಸಂಜುಕುಮಾರ ಮೇತ್ರೆ, ರಾಜಕುಮಾರ ಗುನ್ನಳ್ಳಿ, ರಾಜಕುಮಾರ ಭಾವಿಕಟ್ಟಿ, ಮಾರುತಿ ಸೂರ್ಯವಂಶಿ, ಪವನ್ ಮಿಠಾರೆ, ಪ್ರಕಾಶ ರಾವಣ, ಸಂತೋಷ ಏಣಕೂರೆ, ವಿಶಾಲ ಹೊನ್ನಾ, ಗೌತಮ ಬಗದಲಕರ್, ಜಗನ್ನಾಥ ಹೊನ್ನಾ, ರವಿ ಭೂಸಂಡೆ, ಪ್ರಕಾಶ ಹಳ್ಳಿಖೇಡ್, ರಾಹುಲ್ ಡಾಂಗೆ, ಅಂಬೇಡ್ಕರ್ ಬೌದ್ಧೆ, ವಿನೀತ ಗಿರಿ, ಕಪಿಲ್ ಗೋಡಬೊಲೆ, ಸರಫ್ರಾಜ್ ಹಾಸ್ಮಿ, ಶಫಿವುಲ್ಲಾ ಬೇಗ್, ಬಾಬುರಾವ ಹೊನ್ನಾ, ಸೈಯದ್ ವಹೀದ್ ಲಖನ್, ಮುನ್ನಾ, ಶ್ರೀಕಾಂತ ಸ್ವಾಮಿ, ವಿಠಲದಾಸ್ ಪ್ಯಾಗೆ, ಶಿವಶರಣಪ್ಪ ಹುಗ್ಗಿ ಪಾಟೀಲ್, ಓಂಪ್ರಕಾಶ್ ರೊಟ್ಟೆ, ರಾಜಪ್ಪ ಗುನಳ್ಳಿಕರ್, ಜೈಶೀಲ ಮೇತ್ರೆ, ಸಂಜಯ ಭೋಸ್ಲೆ, ಅಮೃತ ಮೊಳಕೇರೆ, ಮುಬಶೀರ್ ಸಿಂಧೆ ಇತರರಿದ್ದರು.