

ಬೀದರ್: ನಗರದ ನೌಬಾದ್ ಮಲ್ಲಿ ಅಯ್ಯಪ್ಪ ಸ್ವಾಮಿ ನೂತನ ದೇವಸ್ಥಾನವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಅಯ್ಯಪ್ಪ ಸ್ವಾಮಿ ಅವರ ಮೂರ್ತಿ ಸ್ಥಾಪನೆ ಹಾಗೂ ಕಳಸಾರೋಹಣ ಶ್ರದ್ಧೆ, ಭಕ್ತಿಯಿಂದ ನೆರವೇರಿದವು. ನೌಬಾದ್ ನ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಾನ ಟ್ರಸ್ಟ್ನ ಶ್ರೀನಿವಾಸ ಗುರುಸ್ವಾಮಿ ಹಾಗೂ ಅವರ ಶಿಷ್ಯ ಮಾಲಾಧಾರಿಗಳ ಸಂಕಲ್ಪದ ಫಲವಾಗಿ ಸುಂದರ ದೇಗುಲ ನಿರ್ಮಾಣಗೊಂಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಶ್ರೀ ಶಂಕರಲಿಂಗ ಮಹಾರಾಜ ಸೊಂತ, ಶ್ರೀ ರಾಜಶೇಖರ ಶಿವಾಚಾರ್ಯ ಗೋರ್ಟಾ, ಶಿವಾಜಿ ಮಹಾರಾಜ ಹೈದರಾಬಾದ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಗುರುಸ್ವಾಮಿ, ಪ್ರಮುಖರಾದ ಓಂಕಾರ ಪೂಜಾ ಬೇಕರಿ, ರವಿರಡ್ಡಿ, ನಾಗನಾಥ ಮಡಿವಾಳ, ನಾಗನಾಥ ತಾದಲಾಪುರ, ಸತೀಶ ಮೂಲಗೆ ಮತ್ತಿತರರು ಇದ್ದರು. ಮಾಲಾಧಾರಿಗಳು ಹಾಗೂ ಭಕ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.