

ಬೀದರ್: ಕೇರಳದಲ್ಲಿ ನಡೆದ ಮಲಯಾಳಿ ಮಾಸ್ಟರ್ಸ್ ರಾಜ್ಯ ಕ್ರೀಡಾಕೂಟದಲ್ಲಿ ಇಲ್ಲಿಯ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕಿ ಮಮಿತಾಬಾಯಿ ಕದ್ರೆ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿ ಸಾಧನೆಗೈದಿದ್ದಾರೆ.
10 ಕಿ.ಮೀ. ಓಟ ಮತ್ತು 5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನ ಹಾಗೂ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಮಮಿತಾಬಾಯಿ ಈ ಹಿಂದೆಯೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದು ಗಮನ ಸೆಳೆದಿದ್ದಾರೆ.