ರಾಯಪಳ್ಳಿಯಲ್ಲಿ ರೈತ ಆತ್ಯಹತ್ಯೆ

Rajreddy
Published on

ಔರಾದ್: ರಾಯಪಳ್ಳಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ರೈತ ರಾಜರಡ್ಡಿ ಚಂದ್ರಾರಡ್ಡಿ ಪುಣಕುರೆ (32) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹತ್ತಿ ಬೆಳೆ ಸರಿಯಾಗಿ ಬೆಳೆಯದ ಕಾರಣ ಮನೆ ಎದುರಿನ ಗಿಡಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಸ್ಥಳೀಯ ಪಿಕೆಪಿಎಸ್ ಹಾಗೂ ಖಾಸಗಿಯಾಗಿ ತಲಾ ಒಂದು ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಮೃತನ ಪತ್ನಿ ಉಮಾ ನೀಡಿದ ದೂರಿನ ಅನ್ವಯ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net