

ಬೀದರ್: ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲಿಂಗಾಯತ ಸಮಾಜ ವತಿಯಿಂದ ನಗರದ ಮಾಮನಕೇರಿಯ ಕೆ.ಕೆ. ಗಂದಿಗುಡಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ (ಡಿ.24) ಸಂಜೆ 6.30ಕ್ಕೆ 38ನೇ ಶರಣ ಮೇಳದ ಪ್ರಚಾರ ಸಭೆ ಆಯೋಜಿಸಲಾಗಿದೆ.
ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಪೂಜ್ಯ ಮಾತೆ ಡಾ.ಗಂಗದೇವಿ ಸಾನ್ನಿಧ್ಯ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ಅಧ್ಯಕ್ಷತೆ ವಹಿಸುವರು. ಬಸವರಾಜ ಬುಳ್ಳಾ, ಕುಶಾಲರಾವ ಪಾಟೀಲ್ ಖಾಜಾಪುರ, ನಾಗಭೂಷಣ ಕಮಠಾಣೆ, ಚಂದ್ರಶೇಖರ ಹೆಬ್ಬಾಳೆ, ರಾಜೇಂದ್ರಕುಮಾರ ಗಂದಗೆ, ಸಂಜುಕುಮಾರ ಪಾಟೀಲ್ ಇತರರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.