ನಾಗೋರಾದಲ್ಲಿ ಜಾತ್ರೋತ್ಸವ ಸಂಭ್ರಮ

Nagora
Published on

ಬೀದರ್: ನಾಗೋರಾ ಗ್ರಾಮದಲ್ಲಿ ಶ್ರೀ ಭಾಗ್ಯವಂತಿ ದೇವಿ ಮತ್ತು ಭವಾನಿ ಮಂದಿರದ 15ನೇ ಜಾತ್ರಾ ಮಹೋತ್ಸವ ಇತ್ತೀಚೆಗೆ ಎರಡು ದಿನ ಸಂಭ್ರಮದಿಂದ ಜರುಗಿತು.

ಪ್ರಧಾನ ಅರ್ಚಕಿ ಮೀರಾಬಾಯಿ ನಾಗೋರಾ ಸಾನ್ನಿಧ್ಯದಲ್ಲಿ ಪೂಜೆ, ಅಭಿಷೇಕ, ಮಂಗಳಾರತಿ, ಭಜನೆ, ಗಾಯನ ಹಾಗೂ ಜಾದೂ ಪ್ರದರ್ಶನ, ಪ್ರಸಾದ ವಿತರಣೆ ನಡೆದವು. ದೇವಿಯ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪ್ರಕಾಶ ಮತ್ತು ತಂಡದ ಭಜನೆ, ಕಲಾವಿದ ತುಕಾರಾಮ ಭೋಲಾ ಜಾದೂ ಪ್ರದರ್ಶನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net