ಬೀದರ್: ಇಲ್ಲಿಯ ಗುಡ್‍ವಿಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಧ್ಯಾನ ದಿನ ಆಚರಿಸಲಾಯಿತು..ಧ್ಯಾನದಲ್ಲಿ ಅದ್ಭುತ ಶಕ್ತಿ ಇದೆ. ಹಿಂದೆ ಋಷಿ, ಮುನಿಗಳು ಧ್ಯಾನದ ಮೂಲಕವೇ ಮಹತ್ತರ ಸಾಧನೆ ಮಾಡಿದ್ದರು ಎಂದು ಪ್ರಾಚಾರ್ಯೆ ಪ್ರೇಮಾಕುಮಾರಿ ಹೇಳಿದರು..ಧ್ಯಾನದಿಂದ ಶಾಂತಿ, ಸಮಾಧಾನ ದೊರಕುತ್ತದೆ. ಏಕಾಗ್ರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು..ವಿದ್ಯಾರ್ಥಿಗಳು ಸಾಮೂಹಿಕ ಧ್ಯಾನ ಮಾಡಿದರು..ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.