ಸಚಿವ ಅಮಿತ್ ಷಾ ವಜಾಗೊಳಿಸಿ

DSS
Published on

ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ದಲಿತಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡರು, ದಲಿತ ಪರ ಸಂಘಟನೆಗಳ ಪ್ರಮುಖರು, ಕೇಂದ್ರ ಸರ್ಕಾರ ಮತ್ತು ಸಚಿವ ಷಾ ವಿರುದ್ಧ ಘೋಷಣೆ ಕೂಗಿದರು. ಸಚಿವ ಷಾ ಬಳಸಿರುವ ಪದಗಳಿಂದ ಬಾಬಾ ಸಾಹೇಬರ ಅನುಯಾಯಿಗಳಿಗೆ ಅವಮಾನವಾಗಿದೆ. ಕೂಡಲೇ ಅಮಿತ್ ಷಾ ಅವರನ್ನು ಸಚಿವ ಸಂಪುಟಗಿಂದ ವಜಾಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಅಂಬೇಡ್ಕರ್ ಅವರು ದೇಶಕ್ಕೆ ಹೊಸ ದಿಕ್ಕು ತೋರಿಸಿದವರು. ಅವರಿಗೆ ಹಾಗೂ ಅವರು ರಚಿಸಿದ ಸಂವಿಧಾನಕ್ಕೆ ಅವಮಾನ ಮಾಡಿದರೆ ದೇಶ ಸಹಿಸಲ್ಲ. ಬಾಬಾ ಸಾಹೇಬರಿಗೆ ಮಾಡಿರುವ ಅವಮಾನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಷಾ ಅವರು ನೀಡಿದ ಹೇಳಿಕೆ ಅಂಬೇಡ್ಕರ್ಗಷ್ಟೇ ಅಲ್ಲ, ಇಡೀ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಪ್ರಮುಖರಾದ ಶಂಕರರಾವ ದೊಡ್ಡಿ, ಅನೀಲಕುಮಾರ ಬೆಲ್ದಾರ್, ಬಾಬು ಪಾಸ್ವಾನ್, ಮೋಹನ ಕಾಳೇಕರ್, ಸಂಜಯ ಜಾಗೀರದಾರ್, ವೆಂಕಟರಾವ ಸಿಂಧೆ, ಅಹಸಾನ್ ಕಮಾಲ್ ಪರ್ವೇಶ್, ಎಂ.ಎ. ಸಮಿ, ವಿನೋದ ಅಪ್ಪೆ, ಸುನೀಲ ಬಚ್ಚನ್, ವಿಶಾಲ ದೊಡ್ಡಿ, ನಯಂ ಕಿರ್ಮಾನಿ, ರಿಯಾಜ್ ಅಹ್ಮದ್, ಇರ್ಷಾದ್ ಪೈಲ್ವಾನ್, ರೋಹಿದಾಸ ಘೋಡೆ, ಅನೀಲಕುಮಾರ ಬೆಲ್ದಾರ್, ಬಾಬುರಾವ ಬಸವಾನ್, ಬಸವರಾಜ ಮಳಗೆ, ಶಂಕರರಡ್ಡಿ, ಡಿ.ಕೆ. ಸಂಜುಕುಮಾರ, ರಾಕೇಶ್ ಕುರುಬಖೇಳಗಿ, ಫರೀದ್ ಖಾನ್, ಮುಕೇಶ್ ಗಂಗೆನೋರ್, ರವೀಂದ್ರ, ಶಾಮಣ್ಣ ಬಂಬಳಗಿ, ನಿಸಾರ್ ಅಹ್ಮದ್, ಲೋಕೇಶ್ ಮಂಗಲಗಿ, ಶಂಕರ ಜಾಂತಿಕರ್, ತೇಜಮ್ಮ, ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net