ಕ್ಯಾನ್ಸರ್ ಪೀಡಿತರಿಗಾಗಿ ರೂ.12 ಲಕ್ಷ ನಿಧಿ ಸಂಗ್ರಹ

Rotary
Published on

ಬೀದರ್: ದೇಶದಲ್ಲಿ ಹೆಚ್ಚುತ್ತಿರುವ ಮಾರಕ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ವತಿಯಿಂದ ಕ್ರಿಕೆಟ್ ಪಂದ್ಯ ಆಯೋಜನೆ ಮಾಡಿ, ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ 12 ಲಕ್ಷ ರೂ. ನಿಧಿ ಸಂಗ್ರಹಿಸಲಾಗಿದೆ.

ರೋಟರಿ ಕಲ್ಯಾಣ ವಲಯದ ಎಂಟು ತಂಡಗಳು ಭಾಗವಹಿಸಿದ್ದು, ಕ್ರೀಡಾ ಸ್ಫೂರ್ತಿ ಜತೆಗೆ ಮಾರಕ ರೋಗದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ನಗರದಲ್ಲಿ ಮೂರು ದಿನ ವಿನೂತನ ಮಾದರಿಯಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಟೂರ್ನಿಯಲ್ಲಿ ಭಾಲ್ಕಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಡ್ವೆಂಚರ್ ವಾರಿಯಸ್೯ ತಂಡ ರನ್ನರ್ ಅಪ್ ಆಗಿದೆ. ವಿಜೇತ ತಂಡಕ್ಕೆ ಇತ್ತೀಚೆಗೆ ಬಸವರಾಜ ಪಾಟೀಲ್ ಟ್ರೋಫಿ ವಿತರಿಸಲಾಯಿತು.

ಪಂದ್ಯಕ್ಕೆ ಜಿಪಂ ಸಿಇಒ ಗಿರೀಶ್ ಬದೋಲೆ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಚಾಲನೆ ನೀಡಿದರು. ಸಮಾರೋಪದಲ್ಲಿ ಶಾಸಕ ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ರೋಟರಿ ಸಿಲ್ವರ್ ಸ್ಟಾರ್ ಆಧ್ಯಕ್ಷ ಸರ್ದಾರ್ ಪುನೀತ್ಸಿಂಗ್, ಹೈಕಶಿ ಸಂಸ್ಥೆ ನಿರ್ದೇಶಕ ಡಾ.ರಜನೀಶ್ ವಾಲಿ, ಬಸವರಾಜ ಧನ್ನೂರ, ರೋಟರಿ ಕಲ್ಯಾಣ ವಲಯದ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಡಾ.ವಿಪಿನ್ ಗೊಯಲ್, ಸ್ಫೂರ್ತಿ ಧನ್ನೂರ, ಪೂಜಾ ಜಾಜ್೯, ಆದೀಶ್ ವಾಲಿ, ಸಚಿನ್ ಕೊಳ್ಳುರ್, ಡಾ.ರಘು ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net