ಬೀದರ್ ಘಟಕ ವಿಭಾಗಕ್ಕೆ ಪ್ರಥಮ

Scouts And Guides award (1)
Published on

ಬೀದರ್: ಸ್ಕೌಟ್ಸ್ ಮತ್ತು ಗೈಡ್ಸ್‍ನ 2023-24ನೇ ಸಾಲಿನ ಸಮಗ್ರ ಅಭಿವೃದ್ಧಿಗಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನ ಬೀದರ್ ಜಿಲ್ಲಾ ಘಟಕ ಕಲಬುರಗಿ ವಿಭಾಗದಲ್ಲೇ ಪ್ರಥಮ ಸ್ಥಾನ ಗಳಿಸಿದೆ.

ದಕ್ಷಿಣ ಕನ್ನಡದಲ್ಲಿ ಈಚೆಗೆ ನಡೆದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪರಿಷತ್ ಸಭೆಯಲ್ಲಿ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಅವರು ಬೀದರ್ ಜಿಲ್ಲೆಯ ಮುಖ್ಯ ಆಯುಕ್ತರೂ ಆದ ರಾಜ್ಯ ಸಹಾಯಕ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬೀದರ್ ಜಿಲ್ಲಾ ಘಟಕದ ಆಯುಕ್ತ ಡಾ. ಎಚ್.ಬಿ. ಭರಶೆಟ್ಟಿ, ಕಾರ್ಯದರ್ಶಿ ರಮೇಶ ತಿಬಶೆಟ್ಟಿ, ಜಿಲ್ಲಾ ತರಬೇತಿ ಆಯುಕ್ತ ಬಾಬುರಾವ್ ನಿಂಬೂರೆ, ರಾಜ್ಯ ಪರಿಷತ್ ಸದಸ್ಯ ಅನಿಲ್ ಶಾಸ್ತ್ರಿ, ರಾಚಯ್ಯ ನಾಸಿ ಮತ್ತಿತರರು ಇದ್ದರು.

ಭಾರತ ಸ್ಕೌಟ್ಸ್ ಮತ್ತು ಗೌಡ್ಸ್‍ನ ಬೀದರ್ ಜಿಲ್ಲಾ ಘಟಕ ಮೊದಲ ಸ್ಥಾನ ಪಡೆದು ಪ್ರಶಸ್ತಿಗೆ ಭಾಜನವಾಗಿದ್ದಕ್ಕೆ ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net