

ಬೀದರ್: ಬ್ರಿಮ್ಸ್ ಆಸ್ಪತ್ರೆಯ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಶಾ ಅವರ ಅಧ್ಯಕ್ಷೆಯಲ್ಲಿ ನಗರದಲ್ಲಿ ನಡೆದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಹರೀಶ್ (ಅಧ್ಯಕ್ಷ), ಸುಜಾತಾ (ಉಪಾಧ್ಯಕ್ಷೆ), ಅಂಬರೀಷ್ ಬಟನಾಪುರೆ (ಕಾರ್ಯದರ್ಶಿ), ರವಿಕಾಂತ (ಖಜಾಂಚಿ), ಸಂಗೀತಾ, ದ್ರೌಪದಿ, ಜಗದೇವಿ, ಶಾಂತಮ್ಮ ಮಾರುತಿ, ಶಾಂತಮ್ಮ ಘಾಳೆಪ್ಪ ಮತ್ತು ವಸಂತ (ಸದಸ್ಯರು).