

ಬೀದರ್: ಆತ್ಮಹತ್ಯೆಗೆ ಹತ್ನಿಸಿದ ಕಾರಂಜಾ ಸಂತ್ರಸ್ತ ರೈತರನ್ನು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಇಲ್ಲಿನ ಬ್ರಿಮ್ಸ್ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಕುರಿತು ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸಭಾಧ್ಯಕ್ಷರು ಹಾಗೂ ಸರ್ಕಾರದ ಗಮನ ಸೆಳೆದಿರುವೆ. ಆತ್ಮಹತ್ಯೆಯಂಥ ಕೃತ್ಯಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.
ಕಾರಂಜಾ ಸಂತ್ರಸ್ತರು ಸುದೀರ್ಘ ಅವಯಿಂದ ಹೋರಾಟ ನಡೆಸುತ್ತಿದ್ದಾರೆ. ಹಿಂದೆಯೂ ಸದನದಲ್ಲಿ ಈ ವಿಷಯದ ಬಗ್ಗೆ ಗಮನ ಸೆಳೆಯಲಾಗಿತ್ತು. ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಳೆದ ವರ್ಷ ಸೂಕ್ತ ಕ್ರಮದ ಭರವಸೆ ನೀಡಿದ್ದರೂ ನಂತರ ಯಾವುದೇ ಬೆಳವಣಿಗೆ ಆಗಿಲ್ಲ. ಸಚಿವರು ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸಲು ರೈತರೊಂದಿಗೆ ಹೋರಾಡಲು ನಾನು ಸಿದ್ಧ ಎಂದು ಶಾಸಕ ಬೆಲ್ದಾಳೆ ಹೇಳಿದ್ದಾರೆ.
ಹಿರಿಯ ಹೋರಾಟಗಾರ ಲಕ್ಷ್ಮಣ ಗಸ್ತಿ, ಮುಖಂಡರಾದ ಶಶಿ ಹೊಸಳ್ಳಿ, ಸದಾನಂದ ಜೋಶಿ, ಸುರೇಶ ಚನ್ನಶೆಟ್ಟಿ, ಮಲ್ಲಿಕಾರ್ಜುನ ಚಕ್ಕಿ, ದಯಾನಂದ ಸ್ವಾಮಿ, ಕಲ್ಯಾಣರಾವ ಬಿರಾದಾರ್ ಇತರರಿದ್ದರು