ಕವಿಗಳಿಗೆ ಸತತ ಅಧ್ಯಯನ ಅಗತ್ಯ

Kavigosti
Published on

ಬೀದರ್: ಕವಿಗಳು ಸತತ ಅಧ್ಯಯನ ಮತ್ತು ಜೀವನಾನುಭವ ಹೊಂದಿರಬೇಕು. ಆಗಲೇ ಶ್ರೇಷ್ಠ ಕವಿಯಾಗಲು ಸಾಧ್ಯ ಎಂದು ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಹೇಳಿದರು.

ನಗರದಲ್ಲಿ ಮಂದಾರ ಕಲಾವಿದರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಾಗೂ ಸಂಗೀತ ಮಹೋತ್ಸವ ಉದ್ಘಾಟಿಸಿದ ಅವರು, ಕವಿಯಾದವರಿಗೆ ಸತತ ಅಭ್ಯಾಸ, ಲೋಕವನ್ನು ನೋಡುವ ಸೂಕ್ಷ್ಮದೃಷ್ಟಿ ಇರಬೇಕು. ಆತುರದಲ್ಲಿ ಬರೆದದ್ದೆಲ್ಲ ಕಾವ್ಯವಾಗುವುದಿಲ್ಲ. ಕಾವ್ಯ ರಚಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ಕವಿ ತಿದ್ದುತ್ತಾನೆ. ಹರಿತವಾದ ಕತ್ತಿಗಿಂತಲೂ ಲೇಖನಿಗೆ ಹೆಚ್ಚಿನ ಮಹತ್ವವಿದೆ ಎಂದರು.

ಶ್ರೀ ಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ, ಹಿರಿಯ ಸಾಹಿತಿ ಡಾ.ಎಂ.ಜಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಡಾ.ಶ್ರೇಯಾ ಮಹೀಂದ್ರಕರ್, ಸಂಜೀವಕುಮಾರ ಅತಿವಾಳೆ, ವಿಜಯಕುಮಾರ ಸೋನಾರೆ, ರಘುಶಂಖ ಭಾತಂಬ್ರಾ, ಅಶೋಕ ಬೂದಿಹಾಳ, ಯೋಗೇಂದ್ರ ಯದಲಾಪುರೆ ಮಾತನಾಡಿದರು.

ಸಂತೋಷ ಜೋಳದಬಾಕೆ, ಡಾ.ವಿಶ್ವನಾಥ ಉಪ್ಪೆ, ಮಹೇಶ ಮಜಗೆ, ಶಾಂತಕುಮಾರ ಸ್ವಾಮಿ, ರಾಮಕೃಷ್ಣ ಸಾಳೆ, ಚಂದ್ರಕಾಂತ ದಂಡೆ ಇತರರಿದ್ದರು. ಬಾಬುರಾವ ಗೊಂಡಾ ಸ್ವಾಗತಿಸಿದರು. ರೇವಣಪ್ಪ ಮೂಲಗೆ, ದಿಲೀಪಕುಮಾರ ಮೋಘಾ ನಿರೂಪಣೆ ಮಾಡಿದರು. ಎಸ್.ಬಿ. ಕುಚಬಾಳ ವಂದಿಸಿದರು.

ಓಂಕಾರ್ ಪಾಟೀಲ್, ವೀರಶೆಟ್ಟಿ ಪಾಟೀಲ್, ಡಾ.ನಿಜಲಿಂಗ ರಗಟೆ, ಮಾಯಾದೇವಿ ಗೋಖಲೆ, ಬಸವರಾಜ ದಯಾಸಾಗರ, ಡಾ.ಸುಜಾತಾ ಹೊಸಮನಿ, ಬುದ್ಧದೇವಿ ಸಂಗಮ, ಮೋಹನ ಪಾಟೀಲ್, ಮಲ್ಲಿಕಾರ್ಜುನ ಸ್ವಾಮಿ, ಪುಷ್ಪಾ ಕನಕ, ರವಿದಾಸ ಕಾಂಬ್ಳೆ, ಮಾರುತಿ ಮರಕಲ್ ಕವನ ವಾಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net