ಬಳಕೆಯಿಂದ ಕನ್ನಡ ಭಾಷೆ ಬೆಳವಣಿಗೆ ಸಾಧ್ಯ

Post office Programme - Copy
Published on

ಬೀದರ್: ಹೆಚ್ಚು ಹೆಚ್ಚು ಕನ್ನಡ ಬಳಸುವುದರಿಂದ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವಿದೆ ಎಂದು ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟ ಹೇಳಿದರು.

ಇಲ್ಲಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನೋರಂಜನಾ ಕೂಟ ಹಾಗೂ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಕನ್ನಡ ಪುಸ್ತಕ ಓದಬೇಕು. ಕನ್ನಡದಲ್ಲಿ ಕತೆ, ಕವನಗಳನ್ನು ಬರೆಯಬೇಕು ಎಂದು ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಅಂಚೆ ಮನೋರಂಜನಾ ಕೂಟದ ಕಾರ್ಯದರ್ಶಿ ಮಂಗಲಾ ಭಾಗವತ್ ಮಾತನಾಡಿ, ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಅಂಚೆ ಕಚೇರಿಯಲ್ಲಿ ತಿಂಗಳಿಗೊಂದು ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೇರೆ ಭಾಷೆ ಸಿಬ್ಬಂದಿಗೆ ಕನ್ನಡ ಸಹ ಕಲಿಸಲಾಗುತ್ತಿದೆ ಎಂದು ತಿಳಿಸಿದರು.

ಚುಟುಕು ರಚನೆ ಸ್ಪರ್ಧೆಯಲ್ಲಿ ವಿಜೇತರಾದ ಮಂಗಲಾ ಭಾಗವತ್ (ಪ್ರಥಮ), ವೈಷ್ಣವಿ(ದ್ವಿತೀಯ), ಅರುಣ್ ಪಾಟೀಲ (ತೃತೀಯ), ಅಂಬಿಕಾ ಪಾಟೀಲ, ಸೋಮನಾಥ, ಅಮೂಲ್ಯ ಸ್ವಾಮಿ(ಸಮಾಧಾನಕರ) ಅವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net