ಜಿಲ್ಲಾ ವಿದ್ಯುನ್ಮಾನ ಸಂಘಕ್ಕೆ ಮಲ್ಲಿಕಾರ್ಜುನ ಮರಕಲೆ ಅಧ್ಯಕ್ಷ

Mallikarjun Markale - Copy
Published on

ಬೀದರ್: ಜಿಲ್ಲಾ ವಿದ್ಯುನ್ಮಾನ ಮಾಧ್ಯಮ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಮರಕಲೆ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದಲ್ಲಿ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ರಾಜಕುಮಾರ ಸ್ವಾಮಿ (ಗೌರವಾಧ್ಯಕ್ಷ), ಮಲ್ಲಿಕಾರ್ಜುನ ಕಪ್ಪಿಗುಡಾ (ಕಾರ್ಯಾಧ್ಯಕ್ಷ), ಶಿವಾನಂದ, ಸಂಜೀವಕುಮಾರ ಬುಕ್ಕಾ (ಉಪಾಧ್ಯಕ್ಷರು), ಸುರೇಶ್ ನಾಯ್ಕ್ (ಪ್ರಧಾನ ಕಾರ್ಯದರ್ಶಿ), ವಿಶ್ವ ವಡಗಾಂವ್ ಹಾಗೂ ಶರಣು ಸ್ವಾಮಿ (ಕಾರ್ಯದರ್ಶಿ).

ನಕಲಿ ವಾಹಿನಿ ವಿರುದ್ಧ ಹೋರಾಟ: ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿರುವ ನಕಲಿ ವಾಹಿನಿ ಹಾಗೂ ಯುಟ್ಯೂಬರ್‍ಗಳ ಹಾವಳಿಗೆ ಕಡಿವಾಣ ಹಾಕಲು ಹೋರಾಟ ನಡೆಸಲಾಗಿದೆ. ಜಿಲ್ಲಾಡಳಿತ ನಕಲಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ರಾಜಕುಮಾರ ಸ್ವಾಮಿ ಒತ್ತಾಯಿಸಿದರು.

ಪತ್ರಕರ್ತರಾದ ದುರ್ಗಪ್ಪ ಹೊಸಮನಿ, ಲಿಂಗೇಶ್ ಮರಕಲೆ, ನಂದುಕುಮಾರ, ಅಂಬರೀಷ್ ಸ್ವಾಮಿ, ಆಸೀಫ್, ಭರತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net