ಬಜೆಟ್ ಪೂರ್ವಭಾವಿ ಸಭೆ 13ಕ್ಕೆ

Raju D Bankar CMC Commissanar
Published on

ಬಸವಕಲ್ಯಾಣ: ನಗರಸಭೆಯ 2025-26ರ ಬಜೆಟ್ ಸಿದ್ಧಪಡಿಸುವ ಸಂಬಂಧ ಸಾರ್ವಜನಿಕವಾಗಿ ಸಮಾಲೋಚನೆ ನಡೆಸಲು ಹೊಸ ಸಭಾ ಭವನದಲ್ಲಿ ಬುಧವಾರ ಬೆಳಗ್ಗೆ 11ಕ್ಕೆ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನ ಹೊಂದಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಡಿ.13ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ಪೌರಾಯುಕ್ತ ರಾಜು ಡಿ. ಬಣಕಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net