ಉಚಿತ ತಪಾಸಣೆ, ಔಷಧ ವಿತರಣೆ 14ಕ್ಕೆ

Dr Roopesh ekalkar
Published on

ಬೀದರ್: ನಗರದ ಗಣೇಶ ಮೈದಾನ ಬಳಿಯ ಶ್ರೀ ಸಿದ್ದರಾಮೇಶ್ವರ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಾರ್ಗಶಿರ ಪೂರ್ಣಿಮೆ ದಿನವಾದ ಡಿ.14ರಂದು ಸಂಜೆ 7ರಿಂದ 9 ರವರೆಗೆ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಪ್ರಾಚಾರ್ಯ ಡಾ.ರೂಪೇಶ್ ಎಕಲಾರಕರ್ ತಿಳಿಸಿದ್ದಾರೆ.

ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಹಾಗೂ ಇತರ ಶ್ವಾಸಕೋಶದ ತೊಂದರೆಗಳಿಗಾಗಿ ಶಿಬಿರ ಆಯೋಜಿಸಲಾಗಿದ್ದು, ಬಾಳೆಹಣ್ಣಿನಲ್ಲಿ ಔಷಧ ನೀಡಲಾಗುವುದು. ಎರಡು ವರ್ಷದಿಂದ 75 ವರ್ಷದೊಳಗಿನವರು ಪಾಲ್ಗೊಳ್ಳಬಹುದು. ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಹಾಗೂ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8088299901, 7353097537 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net