ಹಿಂದು ಧರ್ಮದವರ ತುಳಿಯುವ ಷಡ್ಯಂತ್ರ

Swamidas
Published on

ಬೀದರ್: ಅನ್ಯ ಧರ್ಮೀಯವರನ್ನು ಖುಷಿಪಡಿಸಲು ದೇಶದ ಬಹುಸಂಖ್ಯಾತ ಹಿಂದು ಧರ್ಮದವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತುಳಿಯುವ ಷಡ್ಯಂತ್ರ ಮಾಡುತ್ತಿದೆ ಎಂದು ಕರ್ನಾಟಕ ಮಾದಿಗ ವೆಲೇರ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್ ಆರೋಪಿಸಿದರು.

ಡಿ.8ರಂದು ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಈಶ್ವರಸಿಂಗ್ ಠಾಕೂರ್ ನೇತೃತ್ವದಲ್ಲಿ ನಡೆಯಬೇಕಿದ್ದ ಹಿಂದು ಜಾಗೃತಿ ಬೃಹತ್ ಸಮಾವೇಶಕ್ಕೆ ನಿರ್ಬಂಧ ಹೇರಿ ರದ್ದುಪಡಿಸಲಾಯಿತು. ಸಮಾವೇಶದ ಮುಖ್ಯ ಭಾಷಣಕಾರರಾಗಿದ್ದ ಮಾಧವಿ ಲತಾ, ಕಾಜಲ್ ಹಿಂದುಸ್ತಾನಿ ಹಾಗೂ ಪ್ರಮೋದ್ ಮುತಾಲಿಕ ಅವರನ್ನು ಜಿಲ್ಲೆಗೆ ಬರದಂತೆ ನಿಷೇಧ ಹೇರಿದ್ದು ಖಂಡನೀಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಸಮಾವೇಶಕ್ಕೆ ತಿಂಗಳಿಂದ ಸಿದ್ಧತೆ ನಡೆದಿತ್ತು. ಜಿಲ್ಲಾಡಳಿತದ ಗಮನಕ್ಕೂ ಇತ್ತು. ಹೀಗಿರುವಾಗ ಕಾರ್ಯಕ್ರಮದ ಒಂದು ದಿನದ ಮೊದಲು ಜಿಲ್ಲಾಡಳಿತ ಆದೇಶ ಹೊರಡಿಸಿ ರದ್ದುಪಡಿಸಿದ್ದು ಸರಿಯಲ್ಲ. ಕಾರ್ಯಕ್ರಮ ಮಾಡದಂತೆ ತಡೆಯುವ ಮೂಲಕ ಹಿಂದುಗಳನ್ನು ಕೆದಕುವ ಕೆಲಸ ಸರ್ಕಾರ, ಜಿಲ್ಲಾಡಳಿತ ಮಾಡಿದೆ. ಈ ಸಂಬಂಧ ಕೋಟ್೯ ಮೊರೆ ಹೋಗಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಕಮಲಹಸನ್ ಬಾವಿದೊಡ್ಡಿ, ಡಾ.ಜೇಮ್ಸ್ ಇಸ್ಲಾಂಪುರ, ಶಿವರಾಜ ನೆಲವಾಡಕರ್, ಸುರೇಶ ದೊಡ್ಡಿ, ವೆಂಕಟರಾವ ಪಾಟೀಲ್, ಸಿದ್ಧಾರ್ಥ ಮುಸ್ತಾಪುರೆ, ಸೀಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net