

ಬೀದರ್: ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಹಿಂದುಗಡೆಯ ನ್ಯಾಷನಲ್ ಕಾಲೇಜು ಸಮೀಪದ ಶತಾಯು ಹೆಲ್ತ್ ಕೇರ್‍ನಲ್ಲಿ ಡಿ.15 ರಂದು
ಬೆಳಿಗ್ಗೆ 5.30 ರಿಂದ 7.30 ರ ವರೆಗೆ ಶ್ವಾಸಕೋಶ ತೊಂದರೆಗಳ ಉಚಿತ ತಪಾಸಣೆ ಹಾಗೂ ಔಷಧಿ ವಿತರಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅಲರ್ಜಿ, ಅಸ್ತಮಾ, ನೆಗಡಿ, ಕೆಮ್ಮು ಹಾಗೂ ಇತರ ಕಾಯಿಲೆಗಳ ತಪಾಸಣೆ ಮಾಡಲಾಗುವುದು ಎಂದು ಡಾ. ಸುಹಾಸಿನಿ ಭಾವೆ ತಿಳಿಸಿದ್ದಾರೆ.
ಹೆಸರು ನೋಂದಾಯಿಸಿದವರಿಗೆ ಮಾತ್ರ ಮಾರ್ಗಶಿರ ಪೂರ್ಣಿಮೆ ದಿನ ನೀಡಲಾಗುವ ಶ್ವಾಸಕೋಶ ಸಂಬಂಧಿ ರೋಗಿಗಳನ್ನು ತಡೆಗಟ್ಟುವ ಔಷಧಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ತಪಾಸಣೆ ಹಾಗೂ ಔಷಧಕ್ಕಾಗಿ ಆಸಕ್ತರು ಡಿಸೆಂಬರ್ 12 ರ ಸಂಜೆ 4 ರ ಒಳಗೆ ಹೆಸರು ನೋಂದಾಯಿಸಬಹುದು. ನೋಂದಣಿಗೆ ಮೊಬೈಲ್ ಸಂಖ್ಯೆ 7483922123ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.