

ಬೀದರ್: ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಮಹ್ಮದ್ ಸಿರಾಜೊದ್ದೀನ್ ಹಮೀಲಾಪುರ ಅವರನ್ನು ನೇಮಕ ಮಾಡಲಾಗಿದೆ.
ನಗರದಲ್ಲಿ ಸೋಮವಾರ ಸೇನೆ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನವರ್ ನೇತೃತ್ವದಲ್ಲಿ ಆಯೋಜಿಸಿದ ಸಭೆಯಲ್ಲಿ ಈ ನೇಮಕ ಮಾಡಲಾಗಿದೆ. ಶಿವರಾಜ ನೆಲವಾಳಕರ್, ಚಂದ್ರಶೇಖರ ಪಾಟೀಲ್, ರಾಜಪ್ಪ ಕಮಲಾಪುರೆ, ತುಕರಾಮ ರಾಘಪುರೆ, ನವೀನ್ ಅಲ್ಲಾಪುರೆ, ಸುರೇಶ ದೊಡ್ಡಿ, ಜೇಮ್ಸ್ ಇಸ್ಲಾಂಪುರ, ಸೂರ್ಯಕಾಂತ ಬಲ್ಲೂರ, ವೆಂಕಟೇಶ ಚಿದ್ರಿ, ಶ್ರೀನಾಥ ಚಿದ್ರಿ ಇತರರಿದ್ದರು.