ಸಂವಿಧಾನದಿಂದ ದೇಶದಲ್ಲಿ ಸಮಾನತೆ

dss samavesh
Published on

ಬೀದರ್: ಬಹು ಸಂಸ್ಕೃತಿಯ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿ ಬಳಲಿದರೂ ಸ್ವಾತಂತ್ರ್ಯ ಸಿಕ್ಕ ನಂತರ ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಎಲ್ಲರೂ ಸಮಾನತೆಯಿಂದ ಬದುಕುತ್ತಿದ್ದೇವೆ ಎಂದು ಲೋಕಸಭೆ ಸದಸ್ಯ ಸಾಗರ ಖಂಡ್ರೆ ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ಸಮಿತಿ ನಗರದಲ್ಲಿ ಆಯೋಜಿಸಿದ್ದ ಸಂವಿಧಾನ ಮತ್ತು ಬೌದ್ಧ ಧಮ್ಮ ಸದಾಶಯ ಕುರಿತ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಬಾಲ್ಯದಿಂದಲೇ ಸಮಾನತೆಗಾಗಿ ಸಂಘರ್ಷ ಮಾಡುತ್ತ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶ ಸಾರುವುದರ ಜತೆಗೆ ಜತೆಗೆ ಅದರಂತೆ ನಡೆದುಕೊಂಡರು ಎಂದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಡಾ.ಅಂಬೇಡ್ಕರ್ ದೇಶದ ಭವಿಷ್ಯದ ಬಗ್ಗೆ ಮುಂದಾಲೋಚನೆ ಮಾಡಿ ಆರ್ಥಿಕ, ಶಿಕ್ಷಣ, ರಾಜಕೀಯ ಅಲ್ಲದೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಸಿಗುವಂಥ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ಸ್ವಾತಂತ್ರ್ಯಪೂರ್ವ ದೇಶದಲ್ಲಿ ಜಿಲ್ಲೆಗೊಂದು ಮಾತ್ರ ಪ್ರೌಢ ಶಾಲೆಗಳಿದ್ದವು, ರಸ್ತೆಗಳು ಸರಿ ಇರಲಿಲ್ಲ. ಹಲವು ಸೌಲಭ್ಯಗಳಿಂದ ಜನ ವಂಚಿತಗೊಂಡಿದ್ದರು. ಅಂಬೇಡ್ಕರ್ ಸಂವಿಧಾನ ನೀಡಿದ ನಂತರ ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಂಡವು. ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಮಹಾ ಪರಿನಿರ್ವಾಣ ಸಮಿತಿ ಅಧ್ಯಕ್ಷ ಮಾರುತಿ ಬೌದ್ಧೆ ಅಧ್ಯಕ್ಷತೆ ವಹಿಸಿದ್ದರು. ಶಿವಶರಣಪ್ಪ ಹುಗ್ಗೆ ಪಾಟೀಲ್ ಉಪನ್ಯಾಸ ನೀಡಿದರು.

ಭಂತೆ ಸಂಘ ರಖ್ಖಿತ್, ಶ್ರೀ ಸಿದ್ದರಾಮ ಶರಣರು ಬೆಲ್ದಾಳ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಅಬ್ದುಲ್ ಮನ್ನಾನ್ ಸೇಠ್, ಕಾಶೀನಾಥ ಚಲವಾ, ರಾಜಪ್ಪ ಗುನಳ್ಳಿ, ಎಂ.ಎಸ್. ಮನೋಹರ, ಬಾಬುರಾವ ಹೊನ್ನಾ, ವಿಜಯಕುಮಾರ ಸೋನಾರೆ, ಪ್ರಶಾಂತ ದೊಡ್ಡಿ, ದಿಗಂಬರ ಮಡಿವಾಳ, ಸುನೀಲ ಗಂಜಕರ್, ಸೂರ್ಯಕಾಂತ ಸಾದುರೆ, ವಿಷ್ಣುವರ್ಧನ್ ವಾಲ್ದೊಡ್ಡಿ, ವಿನೋದ ಅಪ್ಪೆ, ಸೈಯದ್ ಸರ್ಫರಾಜ್ ಹಾಸ್ಮಿ, ಸುನೀಲ ಭಾವಿಕಟ್ಟಿ, ಮಾಳಪ್ಪ ಅಡಸಾರೆ, ಪವನ್ ಮಿಠಾರೆ, ಮಲ್ಲಿಕನಾಥ ಮಡಿಕೆ, ಖಾಜಾ ಶೇಖ ಅಜರ್, ರಾಜಕುಮಾರ ವಾಘಮಾರೆ ಇತರರಿದ್ದರು.

ಸುಮಂತ ಕಟ್ಟಿಮನಿ ಪ್ರಾಸ್ತಾವಿಕ ಮಾತನಾಡಿದರು. ಅರುಣ ಪಟೇಲ್ ಸ್ವಾಗತಿಸಿದರು. ಮಹೇಶ ಗೋರನಾಳಕರ್, ರಾಹುಲ್ ಡಾಂಗೆ ನಿರೂಪಣೆ ಮಾಡಿದರು. ವಿನೋದ ಬಂದಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net