

ಬೀದರ್: ಸಂಜಯ್ ಡಾನ್ಸ್ ಅಕಾಡೆಮಿಯು ನಗರದಲ್ಲಿ ‘ಯುವ ಪ್ರತಿಭೆ ನೃತ್ಯ ಹಾಗೂ ಮಾಡೆಲಿಂಗ್ ಸ್ಪರ್ಧೆ' ಹಮ್ಮಿಕೊಂಡಿದೆ.
ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಸೊಲೊ ಡಾನ್ಸ್ ಹಾಗೂ ಸೊಲೊ ಮಾಡೆಲಿಂಗ್ ಸ್ಪರ್ಧೆಗಳು ನಡೆಯಲಿವೆ. ಡಿ. 15 ರಂದು ನಗರದ ಕೆ.ಇ.ಬಿ. ರಸ್ತೆಯಲ್ಲಿರುವ ಐ.ಎಂ.ಎ ಹಾಲ್‍ನಲ್ಲಿ ಸ್ಪರ್ಧೆಯ ಆಡಿಷನ್ ನಡೆಯಲಿದ್ದರೆ, ಡಿ. 22 ರಂದು ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಗ್ರ್ಯಾಂಡ್ ಫಿನಾಲೆ ಜರುಗಲಿದೆ.
ಜಿಲ್ಲೆಯ 6 ರಿಂದ 12 ವರ್ಷದ ಒಳಗಿನ ಮಕ್ಕಳು ಕಿರಿಯರ ವಿಭಾಗ ಹಾಗೂ 12 ವರ್ಷ ಮೇಲ್ಪಟ್ಟವರು ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಸಂಜಯ್ ಡ್ಯಾನ್ಸ್ ಅಕಾಡೆಮಿ ಅಧ್ಯಕ್ಷ ಸಂಜಯ್ ಜೀರ್ಗೆ ತಿಳಿಸಿದ್ದಾರೆ.
ಆಸಕ್ತರು ಡಿ. 15 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ನಡೆಯಲಿರುವ ಆಡಿಷನ್‍ನಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.
ಜಿಲ್ಲೆಯ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಸ್ಪರ್ಧೆ ಸಂಘಟಿಸಲಾಗಿದೆ. ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9844446687 ಅಥವಾ 8970555061 (ಪ್ರವೀಣ್ ವರ್ಮಾ)ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.