

ಔರಾದ್: ಹಂಗರಗಾ ಗ್ರಾಮದ ಶ್ರೀ ಹನುಮಾನ ಮಂದಿರದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರು ಕುಟುಂಬದವರೊಂದಿಗೆ ವಿಶೇಷ ಪೂಜೆ, ಮಹಾಭಿಷೇಕ ನೆರವೇರಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಮಳೆ-ಬೆಳೆ ಸರಿಯಾಗಿ ಬೆಳೆದು ರೈತರ ಬಾಳು ಹಸನಾಗಬೇಕು. ಕ್ಷೇತ್ರದ ಜನತೆಗೆ ಸಮೃದ್ಧಿ ಕಲ್ಪಿಸುವಂತೆ ಪೂಜೆ ನೆರವೇರಿಸಲಾಗಿದೆ ಎಂದು ಚವ್ಹಾಣ್ ಹೇಳಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಸ್ವತಃ ಪ್ರಸಾದ ವಿತರಿಸಿ ಭಕ್ತಿಭಾವ ಮೆರೆಯುವುದರ ಜತೆಗೆ ಅವರೊಂದಿಗೆ ಕುಳಿತು ಚವ್ಹಾಣ್ ಮಹಾಪ್ರಸಾದ ಸೇವಿಸಿದರು.
ಪ್ರಮುಖರಾದ ಮಾರುತಿ ಚವ್ಹಾಣ್, ಸತೀಶ್ ಪಾಟೀಲ್, ಸಚಿನ್ ರಾಠೋಡ್, ಉತ್ತಮ ಪಾಟೀಲ್, ಬಾಪುರಾವ ಕೋಕನಾರೆ, ಪೀರಾಜಿ ಪುಲ್ಲೆವಾಡ, ಪ್ರತಾಪ ರಾಠೋಡ್, ಜ್ಞಾನೋಬಾ ಮೋರೆ, ಜ್ಞಾನೋಬಾ ವಾಡಿಕರ್, ಮಲ್ಲಿಕಾರ್ಜುನ ಮಹಾರಾಜ, ಗಣಪತ ದೇಸಾಯಿ, ಪಾಂಡುರಂಗ ಪಾಟೀಲ್, ದಶರಥ ಪೊಲೀಸ್ ಪಾಟೀಲ್, ರಾಮ ವಗ್ಗೆ, ನಾರಾಯಣ ಪಾಟೀಲ್, ಅಭಿಜೀತ ಕೋಕನಾರೆ, ನರಸಿಂಗ ಪಾಟೀಲ್, ಆತ್ಮರಾಮ ಸುಭಾನೆ, ಶಿವಪ್ಪ ಸ್ವಾಮಿ ಇತರರಿದ್ದರು. ಮಹಾರಾಷ್ಟ್ರದ ಜ್ಞಾನೇಶ್ವರ ಮಹಾರಾಜ ಪಠಾಡೆ ಅವರಿಂದ ರಾತ್ರಿ ಕೀರ್ತನೆ ನಡೆಯಿತು.