ಭಾಷೆ ಅಳಿದರೆ ಸಂಸ್ಕೃತಿ ಅಳಿವು

Kannada Jagruti Programme - Copy
Published on

ಬೀದರ್: ಯಾವುದೇ ಭಾಷೆ ಅಳಿದರೆ ಆ ಸಂಸ್ಕೃತಿಯೂ ಅಳಿದು ಹೋಗುತ್ತದೆ ಎಂದು ಕರ್ನಾಟಕ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಸುನೀತಾ ಕೂಡ್ಲಿಕರ್ ನುಡಿದರು.

ನಗರದ ಗಾಂಧಿಗಂಜ್‍ನ ಆದರ್ಶ ಐ.ಟಿ.ಐ.ನಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಸಾಂಸ್ಕೃತಿಕ ಮಹಿಳಾ ಸಂಘದಿಂದ ನಡೆದ ಕನ್ನಡ ಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಾಹಿತ್ಯ ಸಮೃದ್ಧ ಸಹ ಆಗಿದೆ. ಕನ್ನಡಕ್ಕೆ ಸಂದ ಎಂಟು ಜ್ಞಾನಪೀಠ ಪ್ರಶಸ್ತಿಗಳೇ ಇದಕ್ಕೆ ನಿದರ್ಶನ ಎಂದು ಹೇಳಿದರು.

ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಮಾತೃ ಭಾಷೆ ಬಗ್ಗೆ ಹೆಮ್ಮೆ, ಅಭಿಮಾನ ಹೊಂದಬೇಕು. ಎಲ್ಲೇ ಇದ್ದರೂ ಕನ್ನಡತನವನ್ನು ಮರೆಯಬಾರದು ಎಂದರು.

ಕನ್ನಡ ಸಾಹಿತ್ಯ ಓದುವ ಹಾಗೂ ಕನ್ನಡದಲ್ಲಿ ಮಾತನಾಡುವ ಹವ್ಯಾಸ ಮನೆಯಿಂದಲೇ ಆರಂಭವಾಗಬೇಕು ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿದ್ದಮ್ಮ ಬಸವಣ್ಣೋರ ನುಡಿದರು.

ಸಂಘದ ಅಧ್ಯಕ್ಷೆ ಕಾಂಚನಾ, ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾಟೀಲ ಕಣಜಿ, ಕನ್ನಡ ಪರ ಹೋರಾಟಗಾರ್ತಿ ಡಾ. ಸುನೀತಾ ಸಿ. ಮರಕಲ್, ಪ್ರಮುಖರಾದ ಮಂಗಲಾ ಭಂಗೂರೆ, ಶಾಂತಮ್ಮ ಡೊಣಗಾಪುರೆ, ಮಲ್ಲಮ್ಮ ರಾಜೋಳಿ, ಕಾವೇರಿ ಪಾಂಚಾಳ ಮಾತನಾಡಿದರು.

ಕಲಾವಿದರಾದ ಮನೋಹರ ಹುಪಳಾ, ಶಾಂತಾಬಾಯಿ ಚೊಂಡಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯಕುಮಾರ ಬ್ಯಾಲಹಳ್ಳಿ ಸ್ವಾಗತಿಸಿದರು. ಎಂ.ಪಿ. ವೈಜಿನಾಥ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net