ಧರ್ಮ ಮಾರ್ಗದ ಉಪದೇಶ ನೀಡುವ ಭಗವದ್ಗೀತೆ

Shetkar School
Published on

ಬೀದರ್: ಭಗವದ್ಗೀತೆ ಧರ್ಮ ಮಾರ್ಗದ ಉಪದೇಶ ನೀಡುವ ಗ್ರಂಥವಾಗಿದೆ ಎಂದು ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಉಪನ್ಯಾಸಕ ಮಹೇಶ್ ಭಟ್ ಹೇಳಿದರು.

ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ನಡೆದ ಭಗವದ್ಗೀತೆ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅರ್ಥಪೂರ್ಣ ಜೀವನಕ್ಕಾಗಿ ಭಗವದ್ಗೀತೆ ಅರಿವು ಅವಶ್ಯಕ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ, ಭಗವದ್ಗೀತೆ ಅಧ್ಯಯನದಿಂದ ಭಕ್ತಿ, ಕರ್ಮ, ಜ್ಞಾನ, ಮುಕ್ತಿಯ ಅರಿವಾಗುತ್ತದೆ. ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ ಎಂದು ಹೇಳಿದರು.

ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ, ಸಿದ್ಧಾರೂಢ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿದರು.

ನಿರ್ಮಲಾ, ಜ್ಯೋತಿ ಪಾಟೀಲ, ಮಹಾನಂದ ಬಿ. ಮುರಾರಿ ಇದ್ದರು. ನಾಥನಾಥ ಬಿರಾದಾರ ಸ್ವಾಗತಿಸಿದರು. ವಿಜಯಲಕ್ಷ್ಮಿ ಶೆಟಕಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net