ಪಾಟೀಲ್ ಎಸ್ಡಿಎಂಸಿ ಅಧ್ಯಕ್ಷ

Malchapur
Published on

ಭಾಲ್ಕಿ: ಮಳಚಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಗುರುವಾರ ಪದಾಧಿಕಾರಿಗಳ ಅವಿರೋಧ ಆಯ್ಕೆ ಮಾಡಲಾಯತು.

ಬಸವರಾಜ ಪಾಟೀಲ್ (ಅಧ್ಯಕ್ಷ), ಧನರಾಜ ಐನಾಪುರೆ (ಉಪಾಧ್ಯಕ್ಷ), ಗೋವಿಂದ ಮೂಲಗೆ, ಶಿವಲೀಲಾ ಸ್ವಾಮಿ, ವೀರಶೆಟ್ಟಿ ಹಡಪದ, ಶಿವಮಂಗಲಾ ಲಕ್ಕಶೆಟ್ಟಿ, ಪಂಡಿತ ಕುರನಳ್ಳಿ, ಜಗದೇವಿ ಜಗನ್ನಾಥ, ಸೈಯದ್ (ಸದಸ್ಯರು) ಆಯ್ಕೆಯಾಗಿದ್ದಾರೆ.

ಈ ಎಲ್ಲರನ್ನು ಸನ್ಮಾನಿಸಿದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಸಂಗಮೇಶ ಪಾಟೀಲ್ ಮಾತನಾಡಿ, ಇಲ್ಲಿನ ಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ತರುತ್ತಿದೆ. ಸಮಿತಿ ನೂತನ ಅಧ್ಯಕ್ಷ ಮತ್ತು ಸದಸ್ಯರು ಶಾಲೆಯ ಸಮಗ್ರ ವಿಕಾಸಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಪ್ರಮುಖರಾದ ಶಾಮರಾವ ಪಾಟೀಲ್, ರಾಜಕುಮಾರ ಪಾಟೀಲ್ ಖಾನಾಪುರ, ಪ್ರವೀಣಕುಮಾರ ಪಾಟೀಲ್, ಶಿವಕುಮಾರ, ರಾಜಕುಮಾರ ಗಂಗಶೆಟ್ಟಿ, ತುಕಾರಾಮ ಏಣಕೂರೆ, ಅಫ್ರೋಜ್ ಹಾಜಿ, ವಿಕ್ರಮ ಪಾಟೀಲ್, ಅಶ್ವಿನ್ ಪಾಟೀಲ್, ಮಲ್ಲಿಕಾರ್ಜುನ, ಶರಣಪ್ಪ, ಧನರಾಜ, ಸಂದೀಪ, ಸಿದ್ದಪ್ಪ, ಸಂತೋಷ, ಬಾಬುರಾವ, ಸಿಆರ್.ಪಿ ಶರಣಪ್ಪ ಕಲ್ಲಪ್ಪನೋರ್, ಪಿಡಿಒ ಶಿವಶೆಟ್ಟಿ ಸೀತಾ, ಮುಖ್ಯಗುರು ಚಿತ್ರಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net