ಇನ್‍ಸ್ಟಿಟ್ಯೂಟ್ ಉದ್ಘಾಟನೆ ಡಿ.3ಕ್ಕೆ

Havshetty patil - Copy
Published on

ಬೀದರ್: ಇಂಡಿಯನ್ ಕಾಂಕ್ರೀಟ್ ಇನ್‍ಸ್ಟಿಟ್ಯೂಟ್(ಐಸಿಐ)ನ 48ನೇ ಕೇಂದ್ರದ ಉದ್ಘಾಟನಾ ಸಮಾರಂಭ ನಗರದ ಲಾವಣ್ಯ ಕನ್ವೆನ್ಶನ್ ಹಾಲ್‍ನಲ್ಲಿ ಡಿ. 3 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಐಸಿಐ ಅಧ್ಯಕ್ಷ ಡಾ. ವಿ. ರಾಮಚಂದ್ರ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಐಸಿಐ ಉಪಾಧ್ಯಕ್ಷ ಡಾ. ಆರ್. ನಾಗೇಂದ್ರ, ನಿಕಟಪೂರ್ವ ಉಪಾಧ್ಯಕ್ಷ ಎಂ. ರವಿಶಂಕರ, ಅಲ್ಟ್ರಾಟೆಕ್ ಸಿಮೆಂಟ್ ಉತ್ತರ ಕರ್ನಾಟಕ ಹಾಗೂ ಗೋವಾದ ಪ್ರಾದೇಶಿಕ ಮುಖ್ಯಸ್ಥ ಶ್ರೀವತ್ಸ ಸುಬ್ರಹ್ಮಣಿ, ಜೆ.ಎಸ್. ಇನ್ಫ್ರಾ ಪ್ರೈವೇಟ್ ಲಿಮಿಟೆಡ್‍ನ ಸಿಎಂಡಿ ಸೂರ್ಯಕಾಂತ ಅಲ್ಮಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಐಸಿಐ ಪ್ರಧಾನ ಕಾರ್ಯದರ್ಶಿ ಆರ್. ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸುವರು ಎಂದು ಐಸಿಐ ಬೀದರ್ ಕೇಂದ್ರದ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net