

ಬೀದರ್: ಶಿವನಗರ ಬಳಿ ಗುರುವಾರ ಸಂಜೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದ ಅನೀಲಕುಮಾರ ಪಾಂಚಾಳ (34) ಮೃತಪಟ್ಟವ. ಬಸ್ನ ಚಕ್ರಗಳು ಸವಾರನ ತಲೆ ಮೇಲಿಂದ ಹರಿದಿದ್ದರಿಂದ ರುಂಡ ಬೇರ್ಪಟ್ಟಿದೆ. ಅನೀಲಕುಮಾರ ನೌಬಾದ್ ಕಡೆ ಸ್ಕೂಟಿಯಲ್ಲಿ ಹೋಗುವಾಗ ಬಸ್ ಡಿಕ್ಕಿ ಹೊಡೆದಿದೆ. ಸ್ಕೂಟಿ ಹಿಂಬದಿ ಕುಳಿತಿದ್ದ ಆಣದೂರದ ವಿಘ್ನೇಶ್ವರ (28) ಗಾಯಗೊಂಡಿದ್ದು, ಬ್ರಿಮ್ಸ್ ನಲ್ಲಿ ದಾಖಲಿಸಲಾಗಿದೆ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದು, ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.