

ಬೀದರ್: ಸಂವಿಧಾನ ದೇಶದ ಪ್ರತಿ ಪ್ರಜೆಗೂ ಸಮಾನ ಹಕ್ಕು ನೀಡಿದೆ ಎಂದು ಬೀದರ್ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಮಂಗಳವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನದ ನಂತರವೇ ಭಾರತದ ಸಂವಿಧಾನ ರಚಿಸಲಾಗಿದೆ. ಸಂವಿಧಾನದ ಕರಡು ತಯಾರಿಸುವಲ್ಲಿ ಡಾ. ಅಂಬೇಡ್ಕರ್ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ಪ್ರಸ್ತುತ ಮಹಿಳೆಯರಿಗೆ ದೊರಕುತ್ತಿರುವ ಸ್ಥಾನಮಾನ ಡಾ. ಅಂಬೇಡ್ಕರ್ ಅವರ ಕೊಡುಗೆ. ಅವರು ಕೊಟ್ಟ ಸಂವಿಧಾನಕ್ಕೆ ಬದ್ಧರಾಗಿ ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಹೇಳಿದರು.
ಸಂವಿಧಾನದ ಬಗ್ಗೆ ಎಲ್ಲರಿಗೂ ಸದಾ ಗೌರವ ಇರಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರ ವಗ್ಗೆ ನುಡಿದರು.
ಪದೋನ್ನತಿ ಹೊಂದಿದ ಇಲಾಖೆಯ ದತ್ತಾತ್ರಿ ರೆಡ್ಡಿ, ವೆಂಕಟೇಶ್ ಎನ್, ರಾಜು ಗೌಳಿ, ಅರುಣ ಪಾಟೀಲ, ಸಂಗಮೇಶ, ವಿಶಾಲ್, ಶಿವಕುಮಾರ, ಬಸವರಾಜ, ರಮೇಶ್, ಸಚಿನ್ ಅವರನ್ನು ಸನ್ಮಾನಿಸಲಾಯಿತು.
ಹರೀಶಕುಮಾರ ನಿರೂಪಿಸಿದರು. ಸುಧಾಕರ ಎಲ್.ಬಿ. ಸ್ವಾಗತಿಸಿದರು. ಮಹೇಶ ಇಬಿಬ್ದಾರ್ ವಂದಿಸಿದರು.