

ಬೀದರ್: ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾಗಿ ತಾಲ್ಲೂಕಿನ ಕಾಡವಾದ ಗ್ರಾಮದ ರಾಜಕುಮಾರ ಭುಸ್ಸಾ ಅವರನ್ನು ನೇಮಕ ಮಾಡಲಾಗಿದೆ.
ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರದೀಪಕುಮಾರ ತಾಜಲಾಪುರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನೇಮಕಾತಿ ಪತ್ರ ವಿತರಣೆ:
ರಾಜಕುಮಾರ ಭುಸ್ಸಾ ಅವರಿಗೆ ಕಾಡವಾದ ಗ್ರಾಮದ ಚರ್ಚ್‍ನಲ್ಲಿ ಸಂಜಯ್ ಜಾಗೀರದಾರ್ ಹಾಗೂ ಪ್ರದೀಪಕುಮಾರ ತಾಜಲಾಪುರ ನೇಮಕಾತಿ ಪತ್ರ ವಿತರಿಸಿದರು.
ಅಸೋಸಿಯೇಷನ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಣಿ ದಿಲೀಪ್, ಸಾಲೋಮನ್ ಡಿ.ಕೆ, ದೇವದಾಸ್ ಚಿದ್ರೆ, ಸ್ಟೆಫನ್, ಇಮ್ಯಾನುವೆಲ್ ಇದ್ದರು.