ಚೆಸ್ ಪಂದ್ಯ 30ಕ್ಕೆ

Nitin Karpoor
Published on

ಬೀದರ್: ಶಿವನಗರ ಬಡಾವಣೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನ.30 ಹಾಗೂ ಡಿ.1ರಂದು ಓಪನ್ ರ್ಯಾಪಿಡ್ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಬೀದರ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ನಿತಿನ್ ಕರ್ಪೂರ್ ಹೇಳಿದರು.

ಪಂದ್ಯದಲ್ಲಿ ಭಾಗವಹಿಸುವ ಕನಿಷ್ಠ 3 ವರ್ಷದಿಂದ 17 ವರ್ಷದೊಳಗಿನ ಆಸಕ್ತರು ನ.28 ರೊಳಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂದ್ಯದಲ್ಲಿ 150 ಸ್ಪರ್ಧಿಗಳು ಭಾಗವಹಿಸಬಹುದು. ಈಗಾಗಲೇ 52 ಜನರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗಾಗಿ ಮೊಬೈಲ್ ಸಂಖ್ಯೆ 8123123785 ಹಾಗೂ 7411751133 ಅವರನ್ನು ಸಂಪರ್ಕಿಸಬಹುದು. ಮೊದಲ ದಿನ ಐದು, ಎರಡನೇ ದಿನ ನಾಲ್ಕು ಸೇರಿದಂತೆ ಒಟ್ಟು 9 ಪಂದ್ಯಗಳು ನಡೆಯಲಿವೆ ಎಂದು ಹೇಳಿದರು.

ಅಸೋಸಿಯೇಷನ್ ಸದಸ್ಯ ಡಾ.ಚಂದ್ರಕಾಂತ ಕುಲಕರ್ಣಿ ಮಾತನಾಡಿ, ಯುವಕರಲ್ಲಿ ಶಿಸ್ತು, ತಾಳ್ಮೆ, ಏಕಾಗೃತೆ ಹಾಗೂ ಪರಸ್ಪರ ಸಹಕಾರ ಮನೋಭಾವನೆ ಬೆಳೆಸುವ ಉದ್ದೇಶದಿಂದ ಚೆಸ್ ಪಂದ್ಯ ಆಯೋಜಿಸಲಾಗಿದೆ ಎಂದರು.

ಅಸೋಸಿಯೇಷನ್ ಕಾರ್ಯದರ್ಶಿ ಸತೀಶ್ ಸ್ವಾಮಿ, ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನ ಚಟ್ನಳ್ಳಿ, ಜಂಟಿ ಕಾರ್ಯದರ್ಶಿ ವಿಕ್ರಮ ತಗಾರೆ, ಸಿದ್ರಾಮೇಶ್ವರ ಶೆಟಕಾರ, ನಿತಿನ್ ಗೋಯಲ್, ರೂಪಾಲಿ ಕರ್ಪೂರ್, ಅನ್ನಪೂರ್ಣ ಸ್ವಾಮಿ, ಸುರೇಶ ಬಿರಾದಾರ್, ಅನುರಾಧಾ ತಟಪಟಿ, ಗೋಪಾಲಕೃಷ್ಣ, ಸಚ್ಚಿದಾನಂದ ಚಿದ್ರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net