ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ದಿನ ಆಚರಣೆ

dist cong office-1
Published on

ಬೀದರ್: ನಗರದ ಶಿವನಗರದಲ್ಲಿ ಇರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ದಿನ ಆಚರಿಸಲಾಯಿತು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ. ಸಮಿ ಅವರು ಸಂವಿಧಾನ ಪೀಠಿಕೆ ಓದಿದರು. ವಕೀಲ ಗುಪ್ತಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಬಿಡಿಎ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಮುಖಂಡರಾದ ಜಾನ್ ವೆಸ್ಲಿ, ಪ್ರದೀಪ್ ಕುಶನೂರ, ರೋಹಿದಾಸ್ ಘೋಡೆ, ಶರಣಪ್ಪ ಶರ್ಮಾ ಮಾತನಾಡಿದರು.

ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಂಡಿತರಾವ್ ಚಿದ್ರಿ, ಪರ್ವೇಜ್ ಕಮಲ್, ರಾಕೇಶ ಕುರುಬಖೇಳಗಿ, ಮಹಮ್ಮದ್ ಗೌಸೊದ್ದಿನ್, ಜಾರ್ಜ್ ಫರ್ನಾಂಡೀಸ್, ಚಂದ್ರಕಾಂತ ಹಿಪ್ಪಳಗಾಂವ್, ರಘುನಾಥರಾವ್ ಜಾಧವ್, ಶಂಕರ ದೊಡ್ಡಿ, ಬಕ್ಕಪ್ಪ ಶೇರಿಕಾರ್, ತೇಜಮ್ಮ ಜ್ಯೋತಿ, ಪ್ರೇಮಾ, ಸಂಗೀತಾ, ವಿಶಾಲ್ ದೊಡ್ಡಿ, ಶಂಕರ ರೆಡ್ಡಿ ಚಿಟ್ಟಾ, ನಾಸಿರ್ ಅಹಮ್ಮದ್, ಮಹಮೂದ್ ಖಾನ್ ಇದ್ದರು. ಡಿ.ಕೆ. ಸಂಜುಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net