ಕರಡು ಮತಪಟ್ಟಿ ಆಕ್ಷೇಪಣೆ ಸಲ್ಲಿಸಲು ಅವಕಾಶ

bidar 1
Published on

ಬೀದರ್: ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಕುಂದು ಕೊರತೆಗಳಿದ್ದಲ್ಲಿ ನ.28ರವರೆಗೆ ಆಕ್ಷೇಪಣೆ ಸಲ್ಲಿಸಲು ಜಿಲ್ಲೆಯ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ರಂದೀಪ್ ಡಿ. ಹೇಳಿದರು.

ಡಿಸಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಆಕ್ಷೇಪಣೆಗಳನ್ನು ಬಿಎಲ್ಒಗಳಿಗೆ ಸಲ್ಲಿಸಬೇಕು. ಏನೇ ಸಮಸ್ಯೆ ಇದ್ದರೂ ನನ್ನ ಮೊಬೈಲ್ (9449839565)ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಆಯಾ ವಿಧಾನಸಭೆ ಕ್ಷೇತ್ರದ ತಹಸಿಲ್ ಕಚೇರಿಯಲ್ಲಿ ಅಹವಾಲು ಸಲ್ಲಿಸಿ ಅಥವಾ ದೂರವಾಣಿಗೆ ಕರೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಆಕ್ಷೇಪಣೆ ಸಲ್ಲಿಸುವವರು ಡಿಸಿ ಕಚೇರಿ ದೂ.08482-225409, ಬಸವಕಲ್ಯಾಣ ತಹಸಿಲ್ -6361106624, 48, ಹುಮನಾಬಾದ್- 9448543450, 49, ಬೀದರ್ ದಕ್ಷಿಣ- 9741089037, 50, ಬೀದರ್- 9448715591, 51, ಭಾಲ್ಕಿ- 9986095678, 52, ಔರಾದ್- 9538137844ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಎಂ.ಡಿ. ಶಕೀಲ್ ಇತರರಿದ್ದರು. ಸಭೆ ನಂತರ ಉಸ್ತುವಾರಿ ಕಾರ್ಯದರ್ಶಿ ವಿವಿಧ ಮತಗಟ್ಟೆಗಳಿಗೆ ತೆರಳಿ ಮತಪಟ್ಟಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net