

ಹುಮನಾಬಾದ್: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಹಳ್ಳಿಖೇಡ್ (ಬಿ) ಪಟ್ಟಣದಲ್ಲಿ ನ.28ರಂದು ಬೆಳಗ್ಗೆ 11.30ಕ್ಕೆ ಭವಾನಿ ಮಂದಿರ ಹತ್ತಿರ ಸುವರ್ಣ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ತಾಲೂಕಾಧ್ಯಕ್ಷ ವೀರೇಶರಡ್ಡಿ ಬೋತಗಿಕರ್ ತಿಳಿಸಿದ್ದಾರೆ.
ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಶ್ರೀ ಅಭಿನವ ಶರಣ ಶಂಕರಲಿಂಗ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ರಾಜಶೇಖರ ಪಾಟೀಲ್ ಉದ್ಘಾಟಿಸುವರು. ಮಾಜಿ ಶಾಸಕ ಸುಭಾಷ ಕಲ್ಲೂರ್, ಬ್ಯಾಂಕರಡ್ಡಿ, ಗುಂಡುರಡ್ಡಿ, ಜಗದೇವಿ ಆರ್.ಶಂಕೆ ಇತರರು ಪಾಲ್ಗೊಳ್ಳುವರು. ವೇದಿಕೆ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.