

ಬೀದರ್: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಶನಿವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಕಾರ ಅಧ್ಯಕ್ಷ ಅಮೃತರಾವ ಚಿಮಕೋಡೆ, ಪ್ರಮುಖರಾದ ಸಂಜಯ ಜಾಗೀರದಾರ್, ಪ್ರಶಾಂತ ದೊಡ್ಡಿ, ವಿನೋದ ಅಪ್ಪೆ, ಸುನೀಲ ಬಚ್ಚನ್, ವಿಶಾಲ ದೊಡ್ಡಿ, ನಯೀಮ್ ಕಿರ್ಮಾನಿ, ಎಂಡಿ ರಿಯಾಜ್, ಡಿ.ಕೆ.ಸಂಜುಕುಮಾರ, ಗೋವರ್ಧನ ರಾಠೋಡ್, ಸಂಗಮೇಶ ಮೂಲಗೆ ಇತರರಿದ್ದರು.