ಬೃಹತ್ ಹೋರಾಟ 25ರಂದು

photo
Published on

ಬೀದರ್: ವಕ್ ಬೋಡ್೯ ಹೆಸರಿನಲ್ಲಿ ರೈತರ ಭೂಮಿ ಕಬಳಿಸುತ್ತಿರುವುದನ್ನು ಖಂಡಿಸಿ ವಕ್ ಹಟಾವೋ-ಭಾರತ್ ಬಚಾವೋ ಸಮಿತಿ ವತಿಯಿಂದ ನ.25 ರಂದು ನಗರದಲ್ಲಿ ಬೃಹತ್ ಹೋರಾಟ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಮಿತ್ ಚಿಂಚೋಳೆ ಹೇಳಿದರು.

ಗಣೇಶ ಮೈದಾನದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೈತರು, ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೋರಾಟಕ್ಕೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಪ್ರತಾಪಸಿಂಹ, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಬಿ.ವಿ.ನಾಯಕ, ಬಿ.ಪಿ.ಹರೀಶ್, ಚಂದ್ರಪ್ಪ, ಎನ್.ಆರ್. ಸಂತೋಷ, ಎಂ. ಭರತ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಿತಿ ಸದಸ್ಯ ಸೋಮನಾಥ ಜ್ಯಾಂತಿ ಮಾತನಾಡಿ, ನ.25ರಂದು ಬೆಳಗ್ಗೆ 9ಕ್ಕೆ ರೇಜಂತಲ್ ಸಿದ್ಧಿವಿನಾಯಕ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯಲಾಗುವುದು. ನಂತರ 10ಕ್ಕೆ ಧರ್ಮಾಪುರ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಯತ್ನಾಳ ಹಾಗೂ ಇತರರು ಚರ್ಚೆ ಮಾಡುವರು. 11.30ಕ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಧ್ಯಾಹ್ನ 2ಕ್ಕೆ ತಾಲೂಕಿನ ಚಟ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಸಮಿತಿ ಸಂಚಾಲಕ ವಿರೂಸಿಂಗ್, ಕಾರ್ಯದರ್ಶಿ ಜಗಮೋಹನಸಿಂಗ್ ಪ್ರಮುಖರಾದ ಸೋಮನಾಥ ಜನತೆ, ಸುಧಾಕರ ಬಚರೆ, ಸಂತೋಷ ಮಡಿಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net