

ಬೀದರ್: ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಸಂಗೀತಕ್ಕೆ ರೋಗ ನಿವಾರಿಸುವ ಶಕ್ತಿಯೂ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಮಾಳಚಾಪುರ ಸಹಯೋಗದಡಿ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂಗೀತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದರು.
ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ಹಿರಿಯರಿಂದ ಉಳಿದಿರುವ ಜಾನಪದ ಕಲೆ ಸಂರಕ್ಷಣೆ ಮಾಡಬೇಕಾದರೆ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಕೋರಿದರು.
ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿದರು. ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಸಾನ್ನಿಧ್ಯ, ಸರಸ್ವತಿ ದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹಲು ಡಪ್ಪೂರ್, ಡಾ.ಎಂ.ಜಿ. ದೇಶಪಾಂಡೆ, ಶೇಷರಾವ ಬೆಳಕುಣಿ, ಡಾ.ಗೌತಮ ಅರಳಿ, ಮಹೆಬೂಬ್ ವಸ್ತಾದ್, ಸುನೀಲ ಭಾವಿಕಟ್ಟಿ, ಸಂತೋಷ ಜೋಳದಾಪಕೆ, ಪಪ್ಪು ಪಾಟೀಲ್ ಖಾನಾಪುರ, ನವಲಿಂಗ ಪಾಟೀಲ್, ಬಸವರಾಜ ಕಟ್ಟಿಮನಿ ಇತರರಿದ್ದರು. ಎಸ್.ಬಿ. ಕುಚಬಾಳ ಸ್ವಾಗತಿಸಿದರು. ದಿಲೀಪ ಮೋಗಾ ನಿರೂಪಣೆ ಮಾಡಿದರು. ಸಮಿತಿ ಅಧ್ಯಕ್ಷ ರಮೇಶ ದೊಡ್ಡಿ ವಂದಿಸಿದರು.
ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರಿಂದ ನಾಡಗೀತೆ, ರವಿ ಗಾಯವಾಡ ತಂಡ ಅಂಬೇಡ್ಕರ್ ಗೀತೆ, ಲಕ್ಷ್ಮೀಬಾಯಿ ಮತ್ತು ರಮಾಬಾಯಿ ತಂಡ ಕ್ರಾಂತಿಗೀತೆ, ದಿಲೀಪ ಕಾಡವಾದ ತಂಡ ದೇಶಭಕ್ತಿ ಗೀತೆ, ಮಲ್ಲಮ್ಮ ತಂಡ ಜಾನಪದ ಗೀತೆ, ಕಲ್ಲಮ್ಮ ಮರೂರ ತಂಡ ಮೊಹರಂ ಪದ, ಶಾರದಾಬಾಯಿ ತಂಡ ಲಂಬಾಣಿ ನೃತ್ಯ, ಸಂಜುಕುಮಾರ ಉಜನಿ ತಂಡ ಸುಗಮ ಸಂಗೀತ, ರಮೇಶ ಕೊಳಾರ್ ತಂಡ ಗಜಲ್, ವಿದ್ಯಾವತಿ ತಂಡ ಜಾನಪದ, ಭೀಮರಾಜ್ಯ ಸಾಹಿತ್ಯ ಪರಿಷತ್ನಿಂದ ಸುಗಮ ಸಂಗೀತ, ಯೇಸುದಾಸ ಅಲಿಯಂಬರ್ ತಂಡ, ನಾಗಮ್ಮಾ ಮರಕಲ್, ಅರ್ಜಾ ಬೇಗಂ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು.