

ಬೀದರ್: ಚಾಂಬೋಳ ಗ್ರಾಮದ ರುದ್ರಮುನೀಶ್ವರ ಸಂಸ್ಥಾನ ಹಿರೇಮಠಕ್ಕೆ ಮುರುಘೇಂದ್ರ ದೇವರ ಪಟ್ಟಾಧಿಕಾರ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಉಜ್ಜಯನಿ ಪೀಠದ ಶಾಖಾ ಮಠವಾದ ರುದ್ರಮುನೀಶ್ವರ ಸಂಸ್ಥಾನ ಹಿರೇಮಠದಲ್ಲಿ ಉಜ್ಜಯನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮುರುಘೇಂದ್ರ ದೇವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಿರೇಮಠದಿಂದ ಮುಖ್ಯರಸ್ತೆ ಪಕ್ಕದ ಸಮಾರಂಭದ ವೇದಿಕೆವರೆಗೆ ಕುದುರೆ ಮೇಲೆ ಪೂಜ್ಯರ ಮೆರವಣಿಗೆ ನಡೆಯಿತು. ಮಹಿಳೆಯರು ಕಳಸ ಹೊತ್ತು ಹೆಜ್ಜೆ ಹಾಕಿದರು. ನಂತರ ಜರುಗಿದ ಸಮಾರಂಭದಲ್ಲಿ ಹೆಡಗಾಪುರದ ಶ್ರೀ ಶಿವಲಿಂಗ ಶಿವಾಚಾರ್ಯರು ಷಟಸ್ಥಲ ಧರ್ಮೋಪದೇಶ ಅನುಗ್ರಹಿಸಿ ಮುರುಘೇಂದ್ರ ದೇವರಿಗೆ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರೆಂದು ನಾಮಕರಣ ಮಾಡಿದರು.
ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ, ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಹಿರೆನಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ, ಹುಡಗಿಯ ಶ್ರೀ ವಿರೂಪಾಕ್ಷ ಶಿವಾಚಾರ್ಯ, ಚಿಟಗುಪ್ಪದ ಶ್ರೀ ಗುರುಲಿಂಗ ಶಿವಾಚಾರ್ಯ, ಹುಕ್ಕೇರಿಯ ಶ್ರೀ ಶಿವಬಸವ ಸ್ವಾಮೀಜಿ, ಅರಳಿಕಟ್ಟಿಯ ಶ್ರೀ ಶಿವಮೂರ್ತಿ ಸ್ವಾಮೀಜಿ, ಹಳ್ಳಿಖೇಡ್ ನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ, ಲಾಡಗೇರಿಯ ಶ್ರೀ ಗಂಗಾಧರ ಶಿವಾಚಾರ್ಯ, ರಾಜೇಶ್ವರದ ಶ್ರೀ ಘನಲಿಂಗ ರುದ್ರಮನಿ ಶಿವಾಚಾರ್ಯ, ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ, ಪ್ರಮುಖರಾದ ರಾಜೇಂದ್ರ ಪೂಜಾರಿ, ದೀಪಕ ಗಾದಗೆ, ನಾಗೇಂದ್ರ ಪಾಟೀಲ್ ಇತರರಿದ್ದರು. ನವಲಿಂಗ ಪಾಟೀಲ್, ಶ್ರೀಕಾಂತ ಸ್ವಾಮಿ ಸೋಲಪುರ ನಿರೂಪಣೆ ಮಾಡಿದರು.