ಮೂಲಸೌಕರ್ಯ ಸಮರ್ಪಕ ಒದಗಿಸಿ

Aurad 1
Published on

ಔರಾದ್: ಪಟ್ಟಣದ ಎಲ್ಲ 20 ವಾಡ್೯ಗಳಲ್ಲಿ ಕುಡಿಯುವ ನೀರು ಸೇರಿ ಸಮರ್ಪಕ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕಚೇರಿ ಉದ್ಘಾಟಿಸಿದ ಅವರು, ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಾರಂಜಾ ಜಲಾಶಯದಿಂದ ಪೈಪ್ ಲೈನ್ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆ ಟೆಂಡರ್ ಮುಗಿದರೂ ಕಾಮಗಾರಿ ಪ್ರಾರಂಭವಾಗದಿರುವುದು ಬೇಸರ ಮೂಡಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದು, ಶೀಘ್ರ ಕೆಲಸ ಪ್ರಾರಂಭಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪಪಂ ಅಧ್ಯಕ್ಷೆ ಸರುಬಾಯಿ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಮುಖ್ಯಾಧಿಕಾರಿ ಸ್ವಾಮಿದಾಸ ಮುಸ್ಕೆ, ಸದಸ್ಯರಾದ ಧೋಂಡಿಬಾ ನರೋಟೆ, ದಯಾನಂದ ಘುಳೆ, ಸಂತೋಷ ಪೋಕಲವಾರ್, ಅಂಬಿಕಾ ಪವಾರ್, ಸುರೇಖಾ ಸಿಂಗೆ, ಸಂಜು ವಡೆಯರ್, ಗುಂಡಪ್ಪ ಮುದಾಳೆ, ಪ್ರಮುಖರಾದ ಬಾಲಾಜಿ ನರೋಟೆ, ಕೃಷ್ಣ ನರೋಟೆ, ಶಿವಾಜಿ ಪಾಟೀಲ್, ಕೈಲಾಶ ಘುಳೆ, ಅಶೋಕ ಅಲ್ಮಾಜೆ, ಯಾದು ಮೇತ್ರೆ, ಆನಂದ ದ್ಯಾಡೆ, ಸಂದೀಪ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net