ವಚನ ವಿಜಯೋತ್ಸವ ಅದ್ದೂರಿ

Gangambike
Published on

ಬೀದರ್: ಬಸವ ಸೇವಾ ಪ್ರತಿಷ್ಠಾನದಿಂದ ಬಸವಗಿರಿಯಲ್ಲಿ 2025ರ ಫೆ.10ರಿಂದ ಮೂರು ದಿನ ವಚನ ವಿಜಯೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ತಿಳಿಸಿದ್ದಾರೆ.

ಪ್ರತಿಷ್ಠಾನ 2002ರಿಂದ ಪ್ರತಿವರ್ಷ ವಚನ ವಿಜಯೋತ್ಸವ ನಡೆಸುತ್ತ ಬಂದಿದೆ. ಆರಂಭಿಕ ಆರು ವರ್ಷ ಶರಣ ಉದ್ಯಾನದಲ್ಲಿ ನಡೆದಿದ್ದು, 2008ರ ನಂತರ ಬಸವಗಿರಿಯಲ್ಲಿ ಸತತ 17 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. 2025ರ ಕಾರ್ಯಕ್ರಮಕ್ಕೆ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹೇಳಿಕೆಯಲ್ಲಿ ಕೋರಿದ್ದಾರೆ.

ಪ್ರತಿಷ್ಠಾನದ ಜತೆ ಸಂಬಂಧ ಇರದ ಪ್ರಭುದೇವ ಸ್ವಾಮಿ ಎನ್ನುವರು ಬಸವಗಿರಿಯಲ್ಲಿ 2025ರ ಫೆ.12ರಿಂದ ವಚನ ವಿಜಯೋತ್ಸವ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಪ್ರಭುದೇವ ಇತರರಿಗೆ ಪ್ರತಿಷ್ಠಾನದ ಯಾವುದೇ ಆಸ್ತಿಯಲ್ಲಿ ವಚನ ವಿಜಯೋತ್ಸವ ಅಥವಾ ಮತ್ತಿತರ ಕಾರ್ಯಕ್ರಮ ಮಾಡಲು ಪರವಾನಗಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net