ಪರಂಪರೆ ಸಪ್ತಾಹ: ಪಥ ಸಂಚಲನ

world Parpare Saptah Path Sanchalan - Copy
Published on

ಬೀದರ್: ವಿಶ್ವ ಪರಂಪರೆ ಸಪ್ತಾಹ ಅಂಗವಾಗಿ ಅಕ್ಕ ಮಹಾದೇವಿ ಮಹಿಳಾ ಕಾಲೇಜು ಹಾಗೂ ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದಲ್ಲಿ ಮಂಗಳವಾರ ಪಥ ಸಂಚಲನ ನಡೆಯಿತು.

ಅಕ್ಕ ಮಹಾದೇವಿ ಕಾಲೇಜಿನಿಂದ ಬಸ್ ನಿಲ್ದಾಣ ಸಮೀಪದ ಸ್ಮಾರಕಗಳ ವರೆಗೆ ಪಥ ಸಂಚಲನ ನಡೆಸಲಾಯಿತು.

ನಂತರ ಕಾಲೇಜಿನಲ್ಲಿ ನಡೆದ ವಿಶ್ವ ಪರಂಪರೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕಿ ಸಿ.ಎನ್. ಮಂಜುಳಾ ಅವರು, ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಪ್ರತಿ ಕಾಲೇಜಿನವರು ಒಂದೊಂದು ಸ್ಮಾರಕ ದತ್ತು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಇಲಾಖೆಯ ಶಿವಪ್ರಕಾಶ್ ಅವರು, ಪ್ರತಿಯೊಬ್ಬರಲ್ಲಿ ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ ಹಾಗೂ ಅಭಿಮಾನ ಮೂಡಿಸುವುದು ವಿಶ್ವ ಪರಂಪರೆ ಸಪ್ತಾಹದ ಉದ್ದೇಶವಾಗಿದೆ ಎಂದು ಹೇಳಿದರು.

ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಬರುವ ದಿನಗಳಲ್ಲಿ ಸ್ಮಾರಕವೊಂದನ್ನು ದತ್ತು ಪಡೆಯಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ರಂಜನಾ ಪಾಟೀಲ ತಿಳಿಸಿದರು.

ಡಾ. ಗಂಗಾಂಬಿಕೆ ಪಾಟೀಲ ಸ್ವಾಗತಿಸಿದರು. ಡಾ. ದೇವರಾಜ ನಿರೂಪಿಸಿದರು. ಮೀನಾ ಗಾಯಕವಾಡ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net