15 ಕಿ.ಮೀ ಓಟ ಸ್ಪರ್ಧೆ: ಮಮಿತಾಬಾಯಿ ಪ್ರಥಮ

Mamitabai
Published on

ಬೀದರ್: ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಹುಬ್ಬಳ್ಳಿ ಹಾಫ್ ಮ್ಯಾರಥಾನ್ 15 ಕಿ.ಮೀ ಓಟದ ಸ್ಪರ್ಧೆಯಲ್ಲಿ ಇಲ್ಲಿಯ ಜಿಲ್ಲಾ ಕಾರಾಗೃಹದ ಮುಖ್ಯ ವೀಕ್ಷಕಿ ಮಮಿತಾಬಾಯಿ ಕದ್ರೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.

35 ವರ್ಷದಿಂದ 44 ವರ್ಷದ ಒಳಗಿನ ವಿಭಾಗದ ಸ್ಪರ್ಧೆಯಲ್ಲಿ ಮಮಿತಾಬಾಯಿ 1 ಗಂಟೆ 29 ನಿಮಿಷದ 15 ಸೆಕೆಂಡ್‍ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಹಾಗೂ ರೂ. 12 ಸಾವಿರ ನಗದು ಬಹುಮಾನಕ್ಕೆ ಪಾತ್ರರಾದರು.

ವಿ.ಆರ್.ಎಲ್ ಹಾಗೂ ಹುಬ್ಬಳ್ಳಿ ಫಿಟ್‍ನೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಮಮಿತಾಬಾಯಿ ಈ ಹಿಂದೆಯೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದಿದ್ದಾರೆ.

ಮಮಿತಾಬಾಯಿ ಕದ್ರೆ ಅವರ ಸಾಧನೆಗೆ ಜಿಲ್ಲಾ ಕಾರಾಗೃಹದ ಅಧೀಕ್ಷಕ ದತ್ತಾತ್ರಿ ಆರ್. ಮೇದಾ, ಜೈಲರ್‍ಗಳಾದ ಸಿದ್ದಪ್ಪಗೌಡ ಪಾಟೀಲ, ತಿಮ್ಮಣ್ಣ ಟಿ. ಭಜಂತ್ರಿ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net