

ಬೀದರ್: ತಾಲ್ಲೂಕಿನ ಮರಕಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಧನರಾಜ ಬುಯ್ಯಾ ಅವರು ನಗರದಲ್ಲಿ ವೃದ್ಧರು, ನಿರ್ಗತಿಕರು ಹಾಗೂ ಬಡವರಿಗೆ ಹೊದಿಕೆಗಳನ್ನು ಉಚಿತವಾಗಿ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ಅವರ ಜನ್ಮದಿನದ ಅಂಗವಾಗಿ ಚಳಿಗಾಲ ಪ್ರಯುಕ್ತ ನಗರದ ಕೆ.ಇ.ಬಿ ಕಚೇರಿ, ಶಿವನಗರ, ಶಿವನಗರ ಪಾದಚಾರಿ ಮಾರ್ಗದಲ್ಲಿ ವೃದ್ಧರು, ನಿರ್ಗತಿಕರು ಮತ್ತು ಬಡವರಿಗೆ 25 ಹೊದಿಕೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.