ಮಹಿಳೆ ನಾಪತ್ತೆ

Premalabai Thakur
Published on

ಬೀದರ್: ಭಾಲ್ಕಿ ಪಟ್ಟಣದ ಜನತಾ ಕಾಲೊನಿಯ ಮಗನ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ.

ಪಟ್ಟಣದ ಲೆಕ್ಚರ್ ಕಾಲೊನಿಯ ಪ್ರೇಮಲಾಬಾಯಿ ರಾಮಸಿಂಗ್ ಠಾಕೂರ್ (66) ನಾಪತ್ತೆಯಾದವರು.

ತಮ್ಮ ತಾಯಿ ನವೆಂಬರ್ 12 ರಂದು ಮನೆಯಿಂದ ತೆರಳಿದ್ದಾರೆ. ಪಟ್ಟಣದ ಅನೇಕ ಕಡೆ ಹುಡುಕಾಟ ನಡೆಸಿದ್ದು, ಈವರೆಗೆ ಪತ್ತೆಯಾಗಿಲ್ಲ ಎಂದು ಪ್ರೇಮಲಾಬಾಯಿ ಅವರ ಪುತ್ರ ಭಗವಾನ್ ರಾಮಸಿಂಗ್ ಠಾಕೂರ್ ತಿಳಿಸಿದ್ದಾರೆ.

ತಾಯಿ ಕಣ್ಮರೆಯಾಗಿರುವ ಕುರಿತು ಅವರು ಭಾಲ್ಕಿ ಟೌನ್ ಠಾಣೆಗೆ ದೂರು ಸಹ ನೀಡಿದ್ದಾರೆ. ಯಾರಿಗಾದರೂ ತಮ್ಮ ತಾಯಿ ಕಂಡರೆ ಮೊಬೈಲ್ ಸಂಖ್ಯೆ 9620633688 (ಸಂಜೀವಕುಮಾರ ಕಾಕನಾಳೆ) ಅಥವಾ 9880688658 (ಮಾಣಿಕಲಾಲ್ ಠಾಕೂರ್)ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net