

ಬೀದರ್: ನಗರದಲ್ಲಿ ನವೆಂಬರ್ 18 ರಂದು ನಡೆಯಲಿರುವ ಭಕ್ತ ಕನಕದಾಸ ಜಯಂತಿ ಉತ್ಸವದ ಯಶಸ್ವಿಗೆ ಕನಕದಾಸ ಜಯಂತಿ ಉತ್ಸವ ಸಮಿತಿ ರಚಿಸಲಾಗಿದೆ.
ನಗರದಲ್ಲಿ ಶುಕ್ರವಾರ ನಡೆದ ಗೊಂಡ(ಕುರುಬ) ಸಮಾಜದ ಸಭೆಯಲ್ಲಿ ಸಮಿತಿ ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಬಂಡೆಪ್ಪ ಕಾಶೆಂಪುರ, ರಘುನಾಥರಾವ್ ಮಲ್ಕಾಪುರೆ, ಅಮೃತರಾವ್ ಚಿಮಕೋಡೆ (ಗೌರವಾಧ್ಯಕ್ಷರು), ಬಾಬುರಾವ್ ಮಲ್ಕಾಪುರೆ (ಅಧ್ಯಕ್ಷ), ಮಲ್ಲಿಕಾರ್ಜುನ ಬಿರಾದಾರ (ಪರಿಹಾರ), ಪೀರಪ್ಪ ಯರನಳ್ಳಿ (ಕಾರ್ಯಾಧ್ಯಕ್ಷರು), ಪಂಡಿತರಾವ್ ಚಿದ್ರಿ, ಮುರಳಿಧರ ಎಕಲಾರಕರ್, ವಿಜಯಕುಮಾರ ಕಾಶೆಂಪುರ, ಬಸವರಾಜ ಹೇಡೆ, ಎಂ.ಎಸ್. ಕಟಗಿ, ಪುಂಡಲೀಕರಾವ್ ಇಟಕಂಪಳ್ಳಿ (ಉಪಾಧ್ಯಕ್ಷರು), ಮಾಳಪ್ಪ ಅಡಸಾರೆ (ಪ್ರಧಾನ ಕಾರ್ಯದರ್ಶಿ), ತುಕಾರಾಮ ಚಿಮಕೋಡ್, ರಾಜಾರಾಮ ಚಿಟ್ಟಾ, ಹಣಮಂತ ಮಲ್ಕಾಪುರ, ಸಂಗಪ್ಪ ಚಿದ್ರಿ, ರತಿಕಾಂತ ಮೇತ್ರೆ, ಶಾಮರಾವ್ ಮಲ್ಕಾಪುರ (ಸಂಘಟನಾ ಕಾರ್ಯದರ್ಶಿಗಳು), ಸಂತೋಷಕುಮಾರ ಜೋಳದಾಪಕೆ, ಲೋಕೇಶ ಮರ್ಜಾಪುರೆ, ಬಜರಂಗ ಕಾಶೆಂಪುರ, ಬಾಬುರಾವ್ ಬರದಾಬಾದೆ, ತುಕಾರಾಮ ಗುಂಪಾ, ಗುಂಡಪ್ಪ ಬುಧೇರಾ, ದೀಪಕ್ ಚಿದ್ರಿ, ಶಿವಕುಮಾರ ರುದನೂರ, ಬೊಮ್ಮಗೊಂಡ ಚಿಟ್ಟಾವಾಡಿ, ಗಣಪತಿ ಕಮಠಾಣ (ಸಹ ಕಾರ್ಯದರ್ಶಿಗಳು), ನಾಗರಾಜ ನಂದಗಾವೆ, ಮೊಗಲಪ್ಪ ಚಿಲ್ಲರ್ಗಿ (ಖಜಾಂಚಿಗಳು), ಬಸವರಾಜ ಮಾಳಗೆ (ಸಲಹೆಗಾರ).
ಸಭೆಯಲ್ಲಿ ಕನಕದಾಸರ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.