

ಬೀದರ್: ಕಾರ್ತಿಕ ಪೂರ್ಣಿಮೆ ನಿಮಿತ್ತ ತಾಲ್ಲೂಕಿನ ಅಮಲಾಪುರ ಗ್ರಾಮದ ಹೇಮರೆಡ್ಡಿ ಮಲ್ಲಮ್ಮ ಮಂದಿರದಲ್ಲಿ ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ದೀಪೋತ್ಸವ ನಡೆಯಿತು.
ಹೇಮರೆಡ್ಡಿ ಮಲ್ಲಮ್ಮ ಮಂದಿರದ ಮಹಿಳಾ ಘಟಕದ ಪದಾಧಿಕಾರಿಗಳು ದೀಪಗಳನ್ನು ಬೆಳಗಿಸಿದರು.
ಪೂಜೆ, ಭಜನೆ, ಕೀರ್ತನೆ, ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶಿವಾರೆಡ್ಡಿ ಅಮಲಾಪುರ, ಚಂದ್ರರೆಡ್ಡಿ ಗಾದಗಿ, ಮಾಣಿಕಪ್ಪ ಜಾಬಾ, ಮಾರುತಿ ಕನ್ನಳ್ಳಿ ಭಜನೆ ನಡೆಸಿಕೊಟ್ಟರು.
ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತಿ ಹೊಂದಿದ ಶಿವಶರಣಪ್ಪ ಹುಗ್ಗಿ ಪಾಟೀಲ, ವೈದ್ಯ ರತ್ನ ಪ್ರಶಸ್ತಿ ಪುರಸ್ಕøತ ಡಾ. ಶ್ರೀಕಾಂತ ರೆಡ್ಡಿ ಅವರನ್ನು ಜಿಲ್ಲಾ ರೆಡ್ಡಿ ಸಮಾಜದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಸಂಗ್ರಾಮ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋಪಾಲರೆಡ್ಡಿ, ಯುವ ಘಟಕದ ಅಧ್ಯಕ್ಷ ರವಿ ರೆಡ್ಡಿ, ಪ್ರಮುಖರಾದ ರಾಜು ಚಿಂತಾಮಣಿ, ಗುರುನಾಥ ರೆಡ್ಡಿ, ಪೆಂಟಾರೆಡ್ಡಿ, ಶ್ರೀನಿವಾಸ್ ರೆಡ್ಡಿ, ಹೇಮರೆಡ್ಡಿ ಮಲ್ಲಮ್ಮ ಮಂದಿರದ ಮಹಿಳಾ ಘಟಕದ ಕರುಣಾ ರೆಡ್ಡಿ, ಶಾಲಿನಿ ಚಿಂತಾಮಣಿ, ಜಗದೇವಿ, ಸ್ವರಾಜ್ ಲಕ್ಷ್ಮಿ, ಚಂದ್ರಕಲಾ, ವಿಜಯಲಕ್ಷ್ಮಿ, ಸುರೇಖಾ, ಸುನೀತಾ ಮೊದಲಾದವರು ಪಾಲ್ಗೊಂಡಿದ್ದರು.